ಮಹಿಳೆಯೋರ್ವಳು ಸೂರ್ಯನ ಬಿಸಿಲು ತಾಗಿ ಅತ್ಯಂತ ಹೆಚ್ಚಿನ ಸಮಸ್ಯೆ ಎದುರಿಸಿದಂತ ಘಟನೆಯೊಂದು ನಡೆದಿದೆ.

ನವದೆಹಲಿ : ಮಹಿಳೆಯೋರ್ವಳು ಸೂರ್ಯನ ಬಿಸಿಲು ತಾಗಿ ಅತ್ಯಂತ ಹೆಚ್ಚಿನ ಸಮಸ್ಯೆ ಎದುರಿಸಿದಂತ ಘಟನೆಯೊಂದು ನಡೆದಿದೆ. 20 ವರ್ಷದ ಹೋಲಿ ಬಾರಿಂಗ್ ಟನ್ ಎಂಬಾಕೆ ರಜೆ ದಿನದಂದು ಸೂರ್ಯನ ಬಿಸಿಲು ಕಾಯಿಸಲು ಬೀಚ್’ಗೆ ತೆರಳಿದ್ದಾಳೆ. ಈ ವೇಳೆ ಆಕೆ ಬಿಸಿಲು ಕಾಯಿಸುತ್ತಿದ್ದಂತೆ ಮುಖವೆಲ್ಲಾ ಕೆಂಪಾಗಿ ಇದ್ದಕ್ಕಿದ್ದಂತೆ ಊದಲು ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಕಣ್ಣನ್ನು ತೆರೆಯಲು ಆಗದ ಸ್ಥಿತಿ ಉಂಟಾಗಿದೆ. ಆಗ ಆಕೆ ತಕ್ಷಣವೇ ಮನೆಗೆ ಆಗಮಿಸಿದ್ದಾಳೆ.

ವೈದ್ಯರನ್ನು ಕಂಡಾಗ ಇದು ಸನ್ ಪಾಯಿಸನಿಂಗ್ ಎಂದು ತಿಳಿದು ಬಂದಿದೆ. ಇದನ್ನು ಪಾಲಿಮಾರ್ಪಿಕ್ ಲೈಟ್ ಎರಪ್ಶನ್ ಎಂದು ಕರೆಯಲಾಗುತ್ತದೆ. ಹೆಚ್ಚು ಸಮಯ ಬಿಸಿಲಲ್ಲಿ ಕಳೆದಾಗ ಇಂತಹ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬಿಸಿಲಿಗೆ ಹೋಗುವ ಮುನ್ನ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿರುತ್ತದೆ.