ತನಗಿಂತ 15 ವರ್ಷದ ಕಡಿಮೆಯಿರುವ ವರನನ್ನು ಮದುವೆಯಾಗಲು ಈ ಮಹಿಳೆ ಎಷ್ಟು ಕೋಟಿ ನೀಡಿದಳು ಗೊತ್ತೆ ?

news | Saturday, January 27th, 2018
Suvarna Web Desk
Highlights

ಆರಂಭದಲ್ಲಿ ಮದುವೆಗೆ ವರನ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ 5 ಕೋಟಿ ಹಣ ನೀಡುತ್ತೇನೆ ಎಂದಾಗ ಓಕೆ ಎಂದರು.

ಜಗತ್ತೆ  ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿ ಗೋಚರಿಸುತ್ತದೆ. ವಿವಾಹದ ವಿಚಾರಕ್ಕೆ ಬಂದಾಗ ಹಲವು ವಿದ್ಯಾಮಾನಗಳು ಜರುಗುತ್ತವೆ. ಮದುವೆಯಾಗುವಾಗ ಎಲ್ಲರು ವಧು ತನಗಿಂತ ಚಿಕ್ಕವರಾಗಿರಬೇಕು ಅಥವಾ ವರ ಮೂರ್ನಾಲ್ಕು ವರ್ಷ ಹಿರಿಯನಾಗಿರಬೇಕೆಂದು ಬಯಸುತ್ತಾರೆ. ಆದರೆ ನೆರೆಯ ದೇಶದಲ್ಲಿ ವಿಚಿತ್ರ ಘಟನೆ ನಡೆದಿದೆ.

38 ವರ್ಷದ ಮಹಿಳೆಯೊಬ್ಬಳಿಗೆ  ತನಗಿಂತ 15 ವರ್ಷ ಕಡಿಮೆಯಿರುವ ಹುಡುಗನನ್ನು ಬರೋಬ್ಬರಿ 5 ಕೋಟಿ ರೂ. ವರದಕ್ಷಿಣೆ ನೀಡಿ ದಾಂಪತ್ಯದ 2ನೇ ಇನಿಂಗ್ಸ್ ಆರಂಭಿಸಿದ್ದಾಳೆ. ಆರಂಭದಲ್ಲಿ ಮದುವೆಗೆ ವರನ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ 5 ಕೋಟಿ ಹಣ ನೀಡುತ್ತೇನೆ ಎಂದಾಗ ಓಕೆ ಎಂದರು. ಈ ಘಟನೆ ನಡೆದಿದ್ದು ಚೀನಾದ ಹೈನಾನ್ ಪ್ರಾಂತ್ಯದಲ್ಲಿ.

ಇದು ಈಕೆಗೆ 2ನೇ ಮದುವೆ. ಅಲ್ಲದೆ ಈ ಮಹಿಳೆಗೆ 14 ವರ್ಷದ ಮಗ ಕೂಡ ಇದ್ದಾನೆ. ಜನವರಿ 10ರಂದು ಇವರಿಬ್ಬರ ವಿವಾಹ ಅದ್ದೂರಿಯಾಗಿ ನೆರೆವೇರಿದೆ. ಚೀನಾದಲ್ಲಿ ಕೆಲವು ಕಡೆ ಈ ರೀತಿಯ ವಿವಾಹಗಳು ಆಗಾಗ ವರದಿಯಾಗಿರುತ್ತವೆ. ಕೆಲವೊಂದು ಬಾರಿ ಪುರುಷರು 2ನೇ ಮಗುವಿಗೆ ನಿರಾಕರಿಸಿದರೆ ಮಹಿಳೆಯರು 2ನೇ ಮದುವೆಯಾಗುವುದುಂಟು.

 

Comments 0
Add Comment

    Related Posts

    Man assault by Jaggesh

    video | Saturday, April 7th, 2018
    Suvarna Web Desk