ಶಿವಮೊಗ್ಗ (ಮಾ. 04): ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮತ್ತೊಬ್ಬ ಮಹಿಳೆ  ಸಾವನ್ನಪ್ಪಿದ್ದಾರೆ.

ರಾಮನಗರದಲ್ಲೂ ಈಗ ಮಂಗನಕಾಯಿಲೆ ಭೀತಿ

ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಂದೋಡಿಗ್ರಾಮದ ಸೀತಮ್ಮ ಪೂಜಾರಿ (58) ಮೃತಪಟ್ಟವರು. ಕಳೆದ ಕೆಲ ದಿನಗಳಿಂದ ಜ್ವರ ಪೀಡಿತರಾಗಿದ್ದ ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.

ಮಂಗನ ಕಾಯಿಲೆ: ಮಲೆನಾಡಲ್ಲಿ ಮರಣ ಮೃದಂಗ

ಶುಕ್ರವಾರ, ಶನಿವಾರ ಕೂಡ ಜಿಲ್ಲೆಯಲ್ಲಿ ಇಬ್ಬರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಇತ್ತೀಚೆಗೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂತು ಎಂದು ನೆಮ್ಮದಿಯಲ್ಲಿದ್ದ ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.