ಗುಂಟೂರು(ಸೆ. 30) ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡ ಮಾತು ಕೇಳದಕ್ಕೆ ಅಂತಿಮವಾಗಿ ಹೆಂಡಿತಿಯಿಂದಲೇ ದಾರುಣ ಹತ್ಯೆಯಾಗಿದ್ದಾನೆ. ಗುಂಟೂರು ಜಿಲ್ಲೆಯ ತಡೆಪಲ್ಲೆ ಮಂಡಲ್ ದ ಪೆನುಮಾಕಾ ಹಳ್ಳಿಯಲ್ಲಿ ನಡೆದ ಘಟನೆ ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದೆ.

ಪೆನುಮಾಕಾ ಹಳ್ಳಿಯ ರತ್ನ ಕುಮಾರ್ ಎಂಬಾತ ಹದಿನಾಲ್ಕು ವರ್ಷದ ಹಿಂದೆ ಸುನೀತಾ ಎಂಬುವರನ್ನು ಮದುವೆಯಾಗಿದ್ದ. ದಂಪತಿಗೆ ಒಮ್ಮ ಮಗ ಮತ್ತು ಮಗಳು ಇದ್ದಾರೆ. ಆದರೆ ಗಂಡ ವಿಜೀಂಗ್ರಮ್ ನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ.

ನಾಲ್ವರು ಪ್ರೇಮಿಗೂ ಪತಿ ದೇಹದ ಒಂದೊಂದು ಭಾಗವನ್ನು ಕತ್ತರಿಸಿ ಕೊಟ್ಟಳು

ಹೆಂಡತಿ ಸುನೀತಾಗೆ ಈ ವಿಚಾರ ಗೊತ್ತಾಗಿದ್ದು ಅನೇಕ ಸಾರಿ ಗಂಡನಿಗೆ ಎಚ್ಚರಿಕೆ ನೀಡಿದ್ದಳು. ಇಷ್ಟಾದರೂ ಗಂಡನ ವರ್ತನೆಯಲ್ಲಿ ಯಾವ ಬದಲಾವಣೆ ಆಗಿರಲಿಲ್ಲ. ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯನ್ನು ಪೆನುಮಾಕಾಗೆ ಕರೆದುಕೊಂಡು ಬಂದು ಆಕೆಗೆ ಒಂದು ಮನೆ ಮಾಡಿಯೂ ಕೊಟ್ಟಿದ್ದ.

ಇದಾದ ಮೇಲೆ ಗಂಡ-ಹೆಂಡತಿ ನಡವೆ ತೀವ್ರ ತೆರನಾದ ಮಾತುಕತೆ ನಡೆದಿದೆ. ವಾಕ್ಸಮರ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸುನೀತಾ ಗಂಡನನ್ನೇ ಕೊಲೆ ಮಾಡುವ ನಿರ್ಧಾರ ಮಾಡಿದ್ದಾಳೆ. ಗಂಡ ರತ್ನ ಕುಮಾರ್ ಕೋಣೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಧಾವಿಸಿದ ಹೆಂಡತಿ ದೊಣ್ಣೆಯೊಂದರಿಂದ ಆತನ ತಲೆಗೆ ಬಲವಾಗಿ ಹೊಡೆದಿದ್ದಾಳೆ. ತಲೆಗೆ ಗಂಭೀರ ಗಾಯವಾಗಿದ್ದ ಗಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಲ್ಲಿಂದ ನೇರವಾಗಿ ಪೊಲೀಸ್ ಸ್ಟೇಶನ್ ಗೆ ಹೋದ ಹೆಂಡತಿ ಸರಂಡರ್ ಆಗಿದ್ದಾರೆ.