ಮಹಿಳೆ ಸಮ್ಮತಿಯಿಲ್ಲದೇ ಆಕೆಯ ಮೈಮುಟ್ಟುವಂತಿಲ್ಲ: ದೆಹಲಿ ಹೈಕೋ

First Published 22, Jan 2018, 8:29 AM IST
Without Women Consent Should not touch her body Delhi High Court Verdict
Highlights

ಅನುಮತಿಯಿಲ್ಲದೆ ಮಹಿಳೆಯರ ಮೈಯನ್ನು ಯಾರೊಬ್ಬರೂ ಮುಟ್ಟುವಂತಿಲ್ಲ ಎಂದು ದಿಲ್ಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ.

ನವದೆಹಲಿ (ಜ.22): ಅನುಮತಿಯಿಲ್ಲದೆ ಮಹಿಳೆಯರ ಮೈಯನ್ನು ಯಾರೊಬ್ಬರೂ ಮುಟ್ಟುವಂತಿಲ್ಲ ಎಂದು ದಿಲ್ಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಒಂಬತ್ತು ವರ್ಷದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಛವಿರಾಮ್ ಎಂಬಾತನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಈ ಅಭಿಪ್ರಾಯ ಪಟ್ಟಿದೆ. ‘ಮಹಿಳೆಯ ದೇಹ ಆಕೆಯ ಸ್ವಂತದ್ದು, ಅದರ ಮೇಲೆ ಸಂಪೂರ್ಣ ಹಕ್ಕು ಆಕೆ ಹೊಂದಿದ್ದಾಳೆ. ಉದ್ದೇಶ ಏನೇ ಆಗಿರಲಿ, ಆಕೆಯ ಅನುಮತಿಯಿಲ್ಲದೆ, ಇತರ ಯಾವುದೇ ವ್ಯಕ್ತಿ ಅನುಮತಿಯಿಲ್ಲದೆ ಆಕೆಯ ದೇಹವನ್ನು ಮುಟ್ಟುವುದಕ್ಕೆ ನಿಷೇಧವಿದೆ’ ಎಂದು ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆ ಸೀಮಾ ಮೈನಿ ತಿಳಿಸಿದ್ದಾರೆ.

‘ಭಾರತ ತಾಂತ್ರಿಕವಾಗಿ ಬಲಶಾಲಿಯಾಗುತ್ತಿದೆ. ಆರ್ಥಿಕವಾಗಿ ಪ್ರಗತಿಯಾಗುತ್ತಿದೆ. ಆದರೆ ಕಾಮುಕರು ಮತ್ತು ವಿಕೃತಕಾಮಿ ಪುರುಷರಿಂದ ಮಹಿಳೆಯರು- ಅವರು ಬಾಲಕಿಯೇ ಆಗಿರಲಿ, ವಯಸ್ಕರೇ ಆಗಿರಲಿ ಇನ್ನೂ ಕಿರುಕುಳಕ್ಕೊಳಪಡುತ್ತಿರುವುದು ವಿಷಾದನೀಯ. ಮಹಿಳೆಯರ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಸು, ಮೆಟ್ರೋ, ಮಾಲ್, ಥೇಟರ್ ಮಾರುಕಟ್ಟೆಗಳಲ್ಲಿ ಲೈಂಗಿಕ ಕಿರುಕುಳ ನಡೆದೇ ಇದೆ’ ಎಂದು ನ್ಯಾಯಾಧೀಶರು ವಿಷಾದಿಸಿದ್ದಾರೆ. ಉತ್ತರ ಪ್ರದೇಶದ ಛವಿರಾಮ್ ಎಂಬಾತ 2014 ರಲ್ಲಿ ದೆಹಲಿಯ ಮುಖರ್ಜಿ ನಗರದ ಮಾರುಕಟ್ಟೆಯೊಂದರಲ್ಲಿ ಅಪ್ರಾಪ್ತ ವಯಸ್ಕ ಹುಡುಗಿಗೆ ಅಸಮರ್ಪಕವಾಗಿ ಮುಟ್ಟಿದ್ದುದಕ್ಕೆ ಶಿಕ್ಷೆ ವಿಧಿಸಲಾಗಿದೆ.

 

loader