ನವದೆಹಲಿ : ಚಿತ್ರ ನಟ, ನಟಿಯರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್, ನಾನಾ ಪಾಟೇಕರ್, ಪರೇಶ್ ರಾವಲ್, ಮಾಧುರಿ ದೀಕ್ಷಿತ್ ಮೊದಲಾದವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ಯೋಜಿಸಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ನಟಿ ಕರೀನಾ ಕಪೂರ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಮಧ್ಯಪ್ರದೇಶದ ಕೆಲ ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. 

ಭೋಪಾಲ್ ಕ್ಷೇತ್ರದಿಂದ ಕರೀನಾಗೆ ಟಿಕೆಟ್ ನೀಡಬೇಕು ಎಂದು ರಾಜ್ಯದ ಕಾಂಗ್ರೆಸ್ ನಾಯಕರಾದ ಗುಡ್ಡು ಚೌಹಾಣ್ ಮತ್ತು ಅನಾಸ್ ಖಾನ್ ಆಗ್ರಹ ಮಾಡಿದ್ದಾರೆ. 

ಕ್ಷೇತ್ರದಲ್ಲಿ ಯುವ ಅಭಿಮಾನಿಗಳನ್ನು ಕರೀನಾ ಹೊಂದಿದ್ದಾರೆ. ಅಲ್ಲದೆ, ಭೋಪಾಲ್‌ನಲ್ಲಿ ಪಟೌಡಿ ಸಮುದಾಯವೂ ಹೆಚ್ಚಿದೆ ಎಂದು ವಾದಿಸಿದ್ದಾರೆ.

ಆದರೆ ಈ ಬಗ್ಗೆ ನಟಿ ಕರೀನಾ ಪ್ರತಿಕ್ರಿಯಿಸಿ , ನನಗೆ ಚಿತ್ರರಂಗವೇ ಮುಖ್ಯವಾಗಿದ್ದು, ತಾವು ರಾಜಕೀಯ ಅಂಗಳಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.