ಬೆಂಗಳೂರು, [ನ.03]: ಈಗಾಗಲೇ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಹಿತಕರ ಘಟನೆಗಳಿಂದಾಗಿ ಈ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಬೇಕೋ, ಬೇಡವೋ ಎನ್ನುವ ಚರ್ಚೆಗಳು ನಡೆದಿವೆ. 

‘ಟಿಪ್ಪುವನ್ನು ಇತಿಹಾಸದಿಂದಲೇ ತಿರಸ್ಕರಿಸಬೇಕು’

ಈ  ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತ ಸಾಧಕ-ಬಾಧಕಗಳ ಕುರಿತು ಇಂದು [ಶನಿವಾರ] ವಿಧಾನಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲೆ ನೇತೃತ್ವದಲ್ಲಿ ಸಭೆ ನಡೆಯಿತು.

ಟಿಪ್ಪು ಜಯಂತಿ ಆಚರಿಸಬೇಕೋ ಬೇಡವೋ? ಇದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗಳು ನಡೆದವು. ಅಂತಿಮವಾಗಿ ನವೆಂಬರ್ 10ಕ್ಕೆ ಟಿಪ್ಪು ಜಯಂತಿ ಆಚರಣೆಗೆ ನಿರ್ಧಾರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಜಯಮಾಲಾ, ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ನಿರ್ಧಾರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಭಾಗಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು. 

ಈ ಹಿಂದೆ ಯಡಿಯೂರಪ್ಪ ಟಿಪ್ಪು ಟೋಪಿ ಹಾಕಿದ್ರು . ಈಗ ಬಿಜೆಪಿ ವಿರೋಧ ಮಾಡ್ತಿರೋದು ಸರಿಯಲ್ಲ.   ಟಿಪ್ಪು ಜಯಂತಿ ವೇಳೆ ಗಲಾಟೆ ಮಾಡಿದ್ರೆ ಬಿಜೆಪಿಯೇ ಹೊಣೆ.  ಜನರ ರಕ್ಷಣೆ ನಮ್ಮ ಹೊಣೆ ಎಂದು ಸಚಿವೆ ಜಯಮಾಲಾ ಹೇಳಿದರು.