Asianet Suvarna News Asianet Suvarna News

‘ಟಿಪ್ಪುವನ್ನು ಇತಿಹಾಸದಿಂದಲೇ ತಿರಸ್ಕರಿಸಬೇಕು’

ಈಗಾಗಲೇ ಟಿಪ್ಪು ಜಯಂತಿ ಆಚರಣೆ ಸಂಬಂಧ ಸಾಕಷ್ಟು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು , ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಜಯಂತಿ ಹಾಗೂ ಸಮಾಜ ವಿಭಜನೆಯ ಸಂಚು ಎಂಬ ವಿಚಾರ ಸಂಕಿರಣ ನಡೆಸಿ ಟಿಪ್ಪುವಿನ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. 

Tipu Should Be Removed From History Says Rohith Chakrathirtha
Author
Bengaluru, First Published Oct 31, 2018, 12:03 PM IST

ಬೆಂಗಳೂರು : ಟಿಪ್ಪು ಸುಲ್ತಾನ್ ಓರ್ವ ದಕ್ಷಿಣ ಭಾರತದ ಔರಂಗಜೇಬ್, ಆತನಿಗಿಂತಲೂ ಕೂಡ ಟಿಪ್ಪುವು ಕ್ರೂರಿಯಾಗಿದ್ದು ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳನ್ನೂ ಕೂಡ ನೀಡಬಹುದಾಗಿದೆ ಎಂದು ಇಂಡಿಕ್ ರೀಸರ್ಚ್ ಸ್ಟಡೀಸ್ ಸಂಚಾಲಕ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ನಡೆದ ಜಯಂತಿ ಹಾಗೂ ಸಮಾಜ ವಿಭಜನೆಯ ಸಂಚು ವಿಚಾರಣ ಸಂಕಿರಣದಲ್ಲಿ ಟಿಪ್ಪುವಿನ ಬಗ್ಗೆ ಮಾತನಾಡಿದ ಅವರು ಆತನ ಕ್ರೂರತೆಗೆ ಉತ್ತಮ ಉದಾಹರಣೆ ಎಂದರೆ ಬಂಟ್ವಾಳದಲ್ಲಿ ಇರುವ ನೆತ್ತರ ಕೆರೆ. ಅದು ಕ್ರಿಶ್ಚಿಯನ್ನರ ರಕ್ತದಿಂದಲೇ ತುಂಬಿ ಹೋಗಿದೆ ಎಂದು ಹೇಳಿದ್ದಾರೆ. 

ಏಕಾಂಗಿಯಾಗಿ ರಣದುಲ್ಲಾಖಾನ್ ಸೋಲಿಸಿ ಓಡಿಸಿದ ಕಂಠೀರವನರಸರಾಜ  ಒಡೆಯರ್ ನಿಜವಾದ ಮೈಸೂರು ಹುಲಿ ಅಥವಾ ಮೈಸೂರಿನ ಸಿಂಹ. ಟಿಪ್ಪು ಸುಲ್ತಾನ್ ಕೇವಲ ಬೊಂಬೆ ಹುಲಿ.  ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಟಿಪ್ಪುವನ್ನು ಇತಿಹಾಸದಿಂದಲೇ ತಿರಸ್ಕರಿಸಬೇಕು ಎಂದು ಅವರು ಹೇಳಿದ್ದಾರೆ. 

ಇನ್ನು ಅಂಕಣಕಾರ ರೋಹಿತ್ ಚಕ್ರತೀರ್ವ ಅವರು ಮಾತನಾಡಿ  ಟಿಪ್ಪು ಕುರಿತಾದ ಧಾರವಾಹಿ ನಿರ್ಮಿಸಿದ ಸಿನೆಮಾ ನಿರ್ದೇಶಕನ‌ ಕಥೆ ಏನಾಯ್ತು. ಟಿಪ್ಪುವಿನ ಖಡ್ಗವನ್ನು ಹರಾಜಿನಲ್ಲಿ‌ಕೊಂಡು ತಂದ ಉದ್ಯಮಿ ಸ್ಥಿತಿ ಏನಾಯ್ತು ಎನ್ನುವುದರ ಬಗ್ಗೆ ಪ್ರಸ್ತಾಪಿಸಿದರು.

Follow Us:
Download App:
  • android
  • ios