ಕೃಷ್ಣ, ಕಾವೇರಿ ಗೋದಾವರಿ ಮುಂದಾದ ನದಿಮೂಲಗಳೆಲ್ಲಾ ನಾಶವಾಗುತ್ತಿವೆ. ಇದರಿಂದ ಕರುನಾಡು ಹತ್ತಾರು ವರ್ಷಗಳಲ್ಲೇ ಬೆಂಗಾಡಾಗಿ, ಜಿಲ್ಲೆ ಜಿಲ್ಲೆ, ಗ್ರಾಮ ಗ್ರಾಮದ ನಡುವೆ ನೀರಿಗಾಗಿ ಯುದ್ಧ ನಡೆಯೋ ಆತಂಕ ಇದೆ.
ಕರುನಾಡಿಗೆ ಹಿಂದೆಂದೂ ಕಂಡರಿಯದಂಥಾ ಬರ ಸಿಡಿಲು ಬಡಿದೆ. ಇದರ ಜೊತೆ ಇನ್ನೊಂದು ಶಾಕಿಂಗ್ ಸುದ್ದಿಯನ್ನು ನಮ್ಮ ಕವರ್ಸ್ಟೋರಿ ತಂಡ ಕೊಡುತ್ತಿದೆ ಅದೇನಂದ್ರೆ ನಮ್ಮ ನಾಡಿನ 25ಕ್ಕೂ ಹೆಚ್ಚು ನದಿಗಳ ಉಗಮ ಸ್ಥಾನ ಪಶ್ಚಿಮಘಟ್ಟಕ್ಕೆ ಬರ ಬಂದಿದೆ. ನದಿ ಮೂಲಗಳು ಶಾಶ್ವತವಾಗಿ ಸಾಯುತ್ತಿವೆ.
ಇಂಥಾ ಒಂದು ಆತಂಕ ನಮ್ಮನ್ನು ಈಗ ಕಾಡಲಾರಂಭಿಸಿದೆ. ಯಾಕಂದರೆ ನಮ್ಮ ರಾಜ್ಯದ 25ಕ್ಕೂ ಹೆಚ್ಚು ನದಿಗಳ ತವರೂರಾದ ಪಶ್ಚಿಮಘಟ್ಟ ಬೆಂಕಿ ಮಳೆಯಿಂದ ತತ್ತರಿಸಿ ಹೋಗಿದೆ. ಕೃಷ್ಣ, ಕಾವೇರಿ ಗೋದಾವರಿ ಮುಂದಾದ ನದಿಮೂಲಗಳೆಲ್ಲಾ ನಾಶವಾಗುತ್ತಿವೆ. ಇದರಿಂದ ಕರುನಾಡು ಹತ್ತಾರು ವರ್ಷಗಳಲ್ಲೇ ಬೆಂಗಾಡಾಗಿ, ಜಿಲ್ಲೆ ಜಿಲ್ಲೆ, ಗ್ರಾಮ ಗ್ರಾಮದ ನಡುವೆ ನೀರಿಗಾಗಿ ಯುದ್ಧ ನಡೆಯೋ ಆತಂಕ ಇದೆ.
ಸುವರ್ಣ ನ್ಯೂಸ್ ಕವರ್ಸ್ಟೋರಿ ತಂಡ ಚಾರಣ ಮಾಡಿ ಪಶ್ಚಿಮ ಘಟ್ಟದ ನಾಶಕ್ಕೆ ಕಾರಣಗಳನ್ನು ಅಧ್ಯಯನ ಮಾಡಿತು. ಆಗ ಗೊತ್ತಾದ ಆತಂಕಕಾರಿ ವಿಚಾರ ಅಂದರೆ ಪಶ್ಚಿಮಘಟ್ಟ ಮಾಫಿಯಾಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ಈ ಮಾಫಿಯಾಗಳನ್ನ ಮಟ್ಟ ಹಾಕಬೇಕಾದ ಸರ್ಕಾರವೇ ಮಾಫಿಯಾ ಜೊತೆ ರಾಜಿ ಮಾಡಿಕೊಂಡಿದೆ. ನಮ್ಮ ಸರ್ಕಾರವೇ ಪಶ್ಚಿಮಘಟ್ಟದ ನಾಶಕ್ಕೆ ಸುಪಾರಿ ಕೊಟ್ಟಿರೋದು ದುರಂತವೇ ಸರಿ. ಇನ್ನಾದರೂ ಸರ್ಕಾರ ಮಾಫಿಯಾಗಳನ್ನು ಗಂಭೀರ ವಾಗಿ ಮಟ್ಟ ಹಾಕದಿದ್ದರೆ ನಾಡಿಗೆ ನಿಜವಾಗಿಯೂ ಆವರಿಸಲಿದೆ ಗ್ರಹಚಾರ.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
