ಎಂ.ಬಿ ಪಾಟೀಲ್’ಗೆ ಪ್ರಬಲ ಎದುರಾಳಿ ಯಾರು..?

First Published 15, Mar 2018, 12:44 PM IST
Who Is The Opposite Candidate Of MB Patil
Highlights

ನಾಲ್ಕನೇ ಬಾರಿ ಗೆಲ್ಲುವ ಉತ್ಸಾಹದೊಂದಿಗೆ ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಎಂ.ಬಿ. ಪಾಟೀಲ್ ಅವರಿಗೆ ಬಿಜೆಪಿಯಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ವಿಜಯಪುರ : ವಿಜುಗೌಡ ಪಾಟೀಲ್ ಅವರು ಬಿಜೆಪಿಯಿಂದ ಅಖಾಡಕ್ಕಿಳಿಯುವುದು ನಿಶ್ಚಿತ. ಜೆಡಿಎಸ್‌ನಿಂದ ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ. ಬಸಪ್ಪ ಹೊನವಾಡ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ರಾಜ್ಯದ ಪ್ರಭಾವಿ ಸಚಿವ ಎಂ.ಬಿ. ಪಾಟೀಲ್ ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಬಾರಿಸಿದ್ದಾರೆ.

ನಾಲ್ಕನೇ ಬಾರಿ ಗೆಲ್ಲುವ ಉತ್ಸಾಹದೊಂದಿಗೆ ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಅವರಿಗೆ ಬಿಜೆಪಿಯಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

loader