ಚಾಮರಾಜಪೇಟೆಯಿಂದ ಜಮೀರ್ ಅಹಮದ್’ಗೆ ಕಾಂಗ್ರೆಸ್ ಟಿಕೆಟ್

Who Is The Congress Candidate To Chamarajanagara
Highlights

ಕಾಂಗ್ರೆಸ್‌ನಿಂದ ಜಿ.ಎ. ಬಾವಾ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಯೇ ಇದ್ದರೂ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿರುವ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಟಿಕೆಟ್ ಭರವಸೆ ನೀಡಲಾಗಿದೆ.

ಚಾಮರಾಜಪೇಟೆ: ಕಾಂಗ್ರೆಸ್‌ನಿಂದ ಜಿ.ಎ. ಬಾವಾ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಯೇ ಇದ್ದರೂ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿರುವ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಟಿಕೆಟ್ ಭರವಸೆ ನೀಡಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಮುಖಂಡರಾಗಿ ಹೊರ ಹೊಮ್ಮಿರುವ ಜಮೀರ್ ಕ್ಷೇತ್ರದಲ್ಲಿ ಮುಸ್ಲಿಮರೇ ನಿರ್ಣಾಯಕರು. ಈ ಮತಗಳನ್ನು ವಿಭಜಿಸುವ ಉದ್ದೇಶದಿಂದ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೂ ಈವರೆಗೆ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಬಿ.ವಿ.ಗಣೇಶ್ ಅವರು ಮತ್ತೊಮ್ಮೆ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಬಾರಿ ಚಿತ್ರೋದ್ಯಮಿ ಲಹರಿ ವೇಲು ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಲಹರಿ ವೇಲು ಅವರು ಅಭ್ಯರ್ಥಿಯಾದಲ್ಲಿ ಜಮೀರ್‌ಗೆ ಪ್ರಬಲ ಪೈಪೋಟಿ ಒಡ್ಡಬಹುದು ಎನ್ನಲಾಗುತ್ತಿದೆ.

loader