ಬೆಂಗಳೂರಿನ ಹಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದೀಗ ಆರ್.ವಿ.ರಸ್ತೆ, ಲಾಲ್‌ಬಾಗ್ ನಿಂದ ಬನಶಂಕರಿ ಟಿಟಿಎಂಸಿ ಮಾರ್ಗ ಕಾಮಗಾರಿ ಆರಂಭಗೊಳ್ಳುತ್ತಿದೆ. ಹೀಗಾಗಿ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು(ಮಾ.13): ನಗರದ ಹಲವಡೆ ಬಿಬಿಎಂಪಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಮುಂದುವರಿದಿದೆ. ಇದೀಗ ಆರ್.ವಿ.ರಸ್ತೆ, ಲಾಲ್‌ಬಾಗ್ ನಿಂದ ಬನಶಂಕರಿ ಟಿಟಿಎಂಸಿ ವರೆಗಿನ ಕಾಮಗಾರಿ ಆರಂಭಗೊಂಡಿದೆ. ಹೀಗಾಗಿ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ತಳ್ಳಾಡುವ ಬಿಎಂಟಿಸಿ ಕಂಡಕ್ಟರ್, ಈ ದೂರು ಎಲ್ಲ ಮಹಿಳೆಯರ ದನಿ
ಅರ್ ವಿ ರಸ್ತೆ, ಲಾಲ್ ಬಾಗ್, ಮಾರೇನಹಳ್ಳಿ ಜಂಕ್ಷನ್, ಬನಶಂಕರಿ ಟಿಟಿಎಂಸಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆಯಿಂದ(ಮಾ.14) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮಾಹಿತಿಗಾಗಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಎಲಿವೇಟೆಡ್ ಕಾರಿಡಾರ್ ಬದಲು ಕಾಂಕ್ರಿಟ್ ಸೇತುವೆ, ಬೆಂಗಳೂರಿನ ಯಾವ ಮಾರ್ಗ?
ಸರಿ ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ವೈಟ್ ಟಾಪಿಂಗ್ ನಡೆಯಲಿದೆ. ಕಾಮಗಾರಿಯಿಂದ ಈ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ. ಹೀಗಾಗಿ ವಾಹನ ಸವಾರರು ಮಾರ್ಗ ಬದಲಾಯಿಸಿ ಸಂಚರಿಸಲು ಬಿಬಿಎಂಪಿ ಸೂಚಿಸಿದೆ. ಇಷ್ಟೇ ಅಲ್ಲ ಅಡಚಣೆಗೆ ಸಹಕರಿಸಬೇಕಾಗಿ ಮನವಿ ಮಾಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 13, 2019, 3:20 PM IST