ಬೆಂಗಳೂರು[ಫೆ.21]  ಹೆಬ್ಬಾಳದ ಎಸ್ಟೀಮ್‌ಮಾಲ್ ನಿಂದ ಚಾಲುಕ್ಯ ವೃತ್ತದವರೆಗೆ ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಮೇಕ್ರಿ ಸರ್ಕಲ್ ಮೂಲಕ ಹೆಬ್ಬಾಳದವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣ ಆಗಬೇಕಿತ್ತು. ಆದರೆ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಶುರುವಾಗುವ ಎಲಿವೇಟೆಡ್ ಕಾರಿಡಾರ್‌ಗೆ ಮೇಕ್ರಿ ಸರ್ಕಲ್ ಬಳಿಯೇ ಬ್ರೇಕ್ ಹಾಕಲಾಗುತ್ತಿದೆ.

ಮೇಕ್ರಿ ಸರ್ಕಲ್ ಮೂಲಕ ಚಾಲುಕ್ಯ ವೃತ್ತ - ಎಸ್ಟೀಮ್ ಮಾಲ್ ವರೆಗೆ ಕಾಂಕ್ರೀಟ್ ಬ್ರಿಡ್ಜ್  ನಿರ್ಮಾಣ ಮಾಡಲಾಗುತ್ತದೆ. ಮೇಕ್ರಿ ವೃತ್ತದಿಂದ ಹೆಬ್ಬಾಳದವರೆಗೆ ಎಲಿವೇಟೆಡ್ ರಸ್ತೆ ಬೇಡ ಎಂಬ ನಿರ್ಧಾರಕ್ಕೆ ಬಂದ ಸರ್ಕಾರ ಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಜಿ.‌ಪರಮೇಶ್ವರ್ ಹೇಳಿಕೆ ನೀಡಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಎಲಿವೇಟೆಡ್ ರಸ್ತೆ ಕಾರಿಡಾರ್ ಯೋಜನೆ ಹೊಣೆ ಹೊತ್ತುಕೊಳ್ಳಲಿದೆ. 

ಒನ್‌ವೇನಲ್ಲಿ ಹೊರಟ ರಾಜ್ಯದ ಮಂತ್ರಿಯನ್ನೇ ತಡೆದ ಪೇದೆ!

23 ಕಿ.ಮೀ ಉದ್ದದ ಎಲಿವೇಟೆಡ್ ರಸ್ತೆ ಕಾರಿಡಾರ್ ಯೋಜನೆ ಇದಾಗಿದೆ. ಎರಡೂ ಯೋಜನೆಗಳನ್ನು ಯಾವ ರೀತಿ ನಿರ್ಮಿಸಬೇಕೆಂದು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ವಾಹನ ದಟ್ಟಣೆ ನಿಯಂತ್ರಿಸಲು ಈ ರಸ್ತೆ ನಿರ್ಮಾಣ ಅನಿವಾರ್ಯವಾಗಿದೆ. ಎಲಿವೇಟೆಡ್ ರಸ್ತೆ ಮತ್ತು ಕಾಂಕ್ರೀಟ್ ಬ್ರಿಡ್ಜ್ ಯೋಜನೆಗಳು ಒಂದೇ ರಸ್ತೆಯಲ್ಲಿ ಬೇಡ  ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.