Asianet Suvarna News Asianet Suvarna News

ತಳ್ಳಾಡುವ ಬಿಎಂಟಿಸಿ ಕಂಡಕ್ಟರ್, ಈ ದೂರು ಎಲ್ಲ ಮಹಿಳೆಯರ ದನಿ

ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಒಂದರ್ಥದಲ್ಲಿ ಮಹಾನಗರದ ಜೀವನಾಡಿ.  ನಮ್ಮ ಮೆಟ್ರೋ ಬಂದರೂ ಪ್ರಾಮುಖ್ಯ ಕಡಿಮೆ ಆಗಿಲ್ಲ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತು ಸಾಗುವ ಸಂಸ್ಥೆ ಮೇಲೆ ಎಲ್ಲರಿಗೂ ಅಪಾರ ಗೌರವ ಇದೆ. ಆ ಗೌರವ ಕಾಪಾಡಿಕೊಳ್ಳುವ ರೀತಿಯಲ್ಲಿ ಸಿಬ್ಬಂದಿಯೂ ವರ್ತಿಸಬೇಕು ಎನ್ನುವುದು ಪ್ರತಿಯೊಬ್ಬರ ನಿರೀಕ್ಷೆ.

Bengaluru Lady commuter accuses BMTC conductor of Misconduct
Author
Bengaluru, First Published Feb 25, 2019, 8:44 PM IST

ಬೆಂಗಳೂರು[ಫೆ.25] ನೀವು ಬಿಎಂಟಿಸಿ ಪ್ರಯಾಣಿಕರಾ? ಪ್ರತಿದಿನ ಓಡಾಡುತ್ತೀರಾ? ಹೌದು ಎಂದಾದರೂ ಈ ಸುದ್ದಿ ತಿಳಿದುಕೊಳ್ಳಲೇಬೇಕು. ಅಲ್ಲ ಎಂದಾದರೂ ತಿಳಿದುಕೊಳ್ಳಲೇಬೇಕು. 

ಹೆಣ್ಣು ಮಗಳೊಬ್ಬಳು ಬಿಎಂಟಿಸಿಯಲ್ಲಿ ಪ್ರಯಾಣಿಸುವ ವೇಳೆ ತನಗಾದ ಕೆಟ್ಟ ಅನುಭವವನ್ನು ಬರೆದುಕೊಂಡಿದ್ದಾರೆ. ಬರೆದುಕೊಂಡಿರುವುದು ಮಾತ್ರ ಅಲ್ಲ ಬಿಎಂಟಿಸಿಗೆ  ಮೇಲ್ ಮಾಡಿ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸುವ ಕೆಲಸವನ್ನು ಬಿಎಂಟಿಸಿ ಮಾಡಿದ್ದು ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

ಹೆಣ್ಣು ಮಗಳ ಮಾತಿನಲ್ಲೇ ಅವಳಿಗಾದ ಕೆಟ್ಟ ಅನುಭವ ಕೇಳಿ...
ನಿಮ್ಮ ಕೆಟ್ಟ ಸೇವೆ ಮತ್ತು ನಿಮ್ಮ ನಿರ್ವಾಹಕ ಮತ್ತು ಚಾಲಕರ ದುರ್ವತನೆಯನ್ನು ಗಮನಕ್ಕೆ ತರ ಬಯಸುತ್ತೇನೆ..

ಕೆಎ 57 ಎಫ್ 1159  ನಂಬರಿನ ಬಸ್ ನಲ್ಲಿ ಫೆ. 25ರಂದು ಬೊಮ್ಮನಹಳ್ಳಿಯಿಂದ ಮೆಜೆಸ್ಟಿಕ್ ಕಡೆ ಪ್ರಯಾಣ ಬೆಳಸುತ್ತಿದ್ದೆ.  ಈ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಹೆಣ್ಣು ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ನಿರ್ವಾಹಕ ಸದಾ ತಮ್ಮ ಮೊಬೈಲ್ ನಲ್ಲೇ ಬ್ಯುಸಿ ಆಗಿದ್ದರು. 

ಮೈ ಕೈ ಮುಟ್ಟುವ ಬೆಂಗಳೂರು ಐಟಿ ಕಂಪನಿ ಮ್ಯಾನೇಜರ್‌

ತಮಗೆ ಪರಿಚಯ ಇರುವ ವ್ಯಕ್ತಿಗಳನ್ನು ನಾರ್ಮಲ್ ಆಗಿ ಕಾಣುವ ಇವರು ಅಪರಿಚಿತರನ್ನು ದೂಡುವುದು, ತಳ್ಳುವುದು ಮಾಡುತ್ತಾರೆ.  ಜನರನ್ನು ನಿಯಂತ್ರಿಸಲು ಕೆಲ ಸಂದರ್ಭ ಈ ರೀತಿ ತಳ್ಳುವುದು ಅನಿವಾರ್ಯವಾದರೂ ಇವರು ವರ್ತನೆ ಮಾಡಿದ ರೀತಿ ಮಾತ್ರ ತುಂಬಾ ಕೀಳುಮಟ್ಟದ್ದಾಗಿತ್ತು. ಬಿಎಂಟಿಸಿ ಇದನ್ನು ಹೇಗೆ ತೆಗೆದುಕೊಳ್ಳುತ್ತದೆ?

ಈ ರೀತಿ ಹೆಣ್ಣು ಮಗಳು ಬರೆದ ನಂತರ ಬಿಎಂಟಿಸಿ ಪ್ರತಿಕ್ರಿಯೆ ನೀಡಿದೆ. ಅಗತ್ಯ ಕ್ರಮ ತೆಗೆದುಕೊಂಡಿದ್ದು ಸಂಬಂಧಿಸಿದವರಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದಿದೆ.

ಇವೆಲ್ಲ ಏನೇ ಇದ್ದರೂ ಹೆಣ್ಣು ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳುವುದು ಸಾಮಾಜಿಕ ಜವಾಬ್ದಾರಿ. ಬಿಎಂಟಿಸಿಯಲ್ಲಿ ಈ ಬಗೆಯ ಕೆಟ್ಟ ಅನುಭವ  ಆದ ಹಲವಾರು ಜನ ಸುಮ್ಮನಿರಬಹುದು ಆದರೆ ಈಕೆ ಮುಂದೆ ಬಂದು ಹೇಳಿರುವುದು ಉಳಿದವರಿಗೆ ಮಾದರಿ.

Follow Us:
Download App:
  • android
  • ios