ವಿಶ್ವದ ಅತ್ಯಂತ ಪ್ರಾಮಾಣಿಕ ನಾಯಕರಲ್ಲಿ ಮನಮೋಹನ್ ಸಿಂಗ್ ನಂ.1

White House Did Not Call Manmohan Singh Most Honest Leader
Highlights

ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿ ‘ವೈಟ್‌ಹೌಸ್’ ಪ್ರಕಟಿಸಿರುವ ಜಗತ್ತಿನ 50 ಪ್ರಾಮಾಣಿಕ ನಾಯಕರ ಸಾಲಿನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮೊದಲನೇ ಸ್ಥಾನ ಪಡೆದಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನವದೆಹಲಿ : ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿ ‘ವೈಟ್‌ಹೌಸ್’ ಪ್ರಕಟಿಸಿರುವ ಜಗತ್ತಿನ 50 ಪ್ರಾಮಾಣಿಕ ನಾಯಕರ ಸಾಲಿನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮೊದಲನೇ ಸ್ಥಾನ ಪಡೆದಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಕಾಂಗ್ರೆಸ್ ಬೆಂಬಲಿಗರು ಇದನ್ನು ಶೇರ್ ಮಾಡಿ ದ್ದಾರೆ. ಇದೇ ರೀತಿಯ ಇನ್ನೊಂದು ಸಂದೇಶ ದಲ್ಲಿ ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಗತ್ತಿನ 50 ಪ್ರಾಮಾಣಿಕ ನಾಯಕರ ಪೈಕಿ ಮೊದನೇ ಸ್ಥಾನ ಪಡೆದಿದ್ದಾರೆ. ಆದರೆ ಪ್ರಧಾನಿ ಮೋದಿ ಇದರಲ್ಲಿ ಯಾವುದೇ ಸ್ಥಾನ ಕೂಡ ಪಡೆದಿಲ್ಲ’ ಎಂದು ಹೇಳಲಾಗಿದೆ. 

ಟ್ವೀಟರ್‌ನಲ್ಲಿ ತಾವು  ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಂಡಿರುವ ಅಭಿಷೇಕ್ ಮಿಶ್ರಾ ಅವರು ಮುನ್ನಡೆಸುತ್ತಿರುವ ‘ವೈರಲಿಂಡಿಯಾ’ ಫೇಸ್‌ಬುಕ್ ಪೇಜ್ ಈ ಕುರಿತ ಫೋಟೋವನ್ನು ಪೋಸ್ಟ್ ಮಾಡಿದೆ. ಆದರೆ ನಿಜಕ್ಕೂ ಮನಮೋಹನ ಸಿಂಗ್ ಅವರು  ಜಗತ್ತಿನ 50  ಪ್ರಾಮಾಣಿಕ ನಾಯಕರಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆಯೇ? ‘ವೈಟ್‌ಹೌಸ್’ ನಿಜಕ್ಕೂ ಇಂಥದ್ದೊಂದು  ಪ್ರಕಟಣೆ ಯನ್ನು ನೀಡಿದೆಯೇ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.

 ಸೋಷಿಯಲ್ ಮೀಡಿಯಾ ದಲ್ಲಿ ಪ್ರಕಟಿಸಿರುವ ಈ ಫೋಟೋ 2016 ರಲ್ಲಿ ಬರಾಕ್ ಒಬಾಮ ವಿವಿಧ ದೇಶಗಳ ನಾಯಕರಿಗೆ ತಮ್ಮ ಕೊನೆಯ ಔಪಚಾರಿಕ ಔತಣ ಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿ ತೆಗೆದಿದ್ದ ಅಪರೂಪದ ಫೋಟೋ ಇದು. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸುಳ್ಳು. (ವೈರಲ್ ಚೆಕ್ )

loader