ನವದೆಹಲಿ[ಜೂ.15]: ಇತ್ತೀಚೆಗೆ ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಮಳೆ ಬಂದಿದ್ದರಿಂದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತಾವೇ ಸ್ವತಃ ಕೊಡೆ ಹಿಡಿದು ಮಳೆಯಿಂದ ರಕ್ಷಣೆ ಒದಗಿಸಿದ್ದರು. ಅದೇ ರೀತಿಯ ಸೌಜನ್ಯವನ್ನು ಇದೀಗ ಕಿರ್ಗಿಸ್ತಾನ್ ಅಧ್ಯಕ್ಷ ಸೂರೊನ್ಬೆ ಜಿನೆಕೋವ್ ಪ್ರದರ್ಶಿಸಿ ದ್ದಾರೆ.

ಶಾಂಘೈ ಶೃಂಗದ ಬಳಿಕ ತಮ್ಮನ್ನು ಭೇಟಿಯಾ ಗಲು ಬಂದ ಮೋದಿ ಅವ ರಿಗೆ ಸೂರೊನ್ಬೆ ಜಿನೆಕೋವ್ ಕೊಡೆ ಹಿಡಿಯುವ ಮೂಲಕ ತಮ್ಮ ಕಚೇರಿಗೆ ಬರಮಾಡಿಕೊಂಡರು.

SCO ಶೃಂಗಸಭೆಯಲ್ಲಿ ಮೋದಿ ಕೊಟ್ಟ ಹೊಡೆತಕ್ಕೆ ಇಮ್ರಾನ್ ಕಕ್ಕಾಬಿಕ್ಕಿ!

ಕಿರ್ಗಿಸ್ತಾನದಲ್ಲಿ ಮೋದಿ, ಇಮ್ರಾನ್ ಭೇಟಿ

ಎರಡು ದಿನಗಳ ಕಾಲ ಒಂದೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರೂ, 7 ಬಾರಿ ಸನಿಹದಲ್ಲೇ ಓಡಾಡಿದರೂ ಪರಸ್ಪರ ಮಾತನಾಡದೇ ಮೌನಕ್ಕೆ ಶರಣಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಕಿರುನಗೆಯೊಂದಿಗೆ ಮೌನ ಮುರಿದಿದ್ದಾರೆ.

ಮೋದಿ ಬೈದ ಪರಿಗೆ ಶಿಷ್ಟಾಚಾರ ಉಲ್ಲಂಘಿಸಿ ಪೇಚಿಗೆ ಸಿಲುಕಿದ ಇಮ್ರಾನ್!