ಬಿಶ್ಕೇಕ್(ಜೂ.14): ಶಾಂಘೈ ಸಹಕಾರ ಸಂಘಟನೆ(SCO)ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭರ್ಜರಿ ತಪರಾಕಿ ನೀಡಿದ್ದಾರೆ. ಮೋದಿ ನೀಡಿದ ಹೊಡೆತ ತಾಳಲಾರದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಶೃಂಗಸಭೆಯ ಶಿಷ್ಟಾಚಾರ ಉಲ್ಲಂಘಿಸಿ ನಗೆಪಾಟಲಾಗೀಡಾಗಿದ್ದಾರೆ.

ಶೃಂಗಸಭೆಯ ಸಭೆಯ ಸಭಾಂಗಣಕ್ಕೆ ಪ್ರವೇಶಿಸುವ ಎಲ್ಲಾ ವಿದೇಶಿ ನಾಯಕರಿಗೆ ಎಲ್ಲರೂ ಎದ್ದು ನಿಂತು ಸ್ವಾಗತ ಕೋರಿದರೆ, ಈ ವೇಳೆ ಇಮ್ರಾನ್ ಖಾನ್ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಲುವ ಮೂಲಕ ಶಿಷ್ಟಾಚಾರ ಮುರಿದಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ, ಎಲ್ಲಾ ದೇಶಗಳ ಮುಖ್ಯಸ್ಥರು ಒಬ್ಬೊಬ್ಬರಾಗಿ ಸಭಾಂಗಣದ ಒಳಗೆ  ಪ್ರವೇಶಿಸುತ್ತಿದ್ದರು. ಈ ಸಮಯದಲ್ಲಿ ಇತರ ದೇಶದ ಎಲ್ಲಾ ನಾಯಕರು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಿದರೆ, ಇಮ್ರಾನ್ ಕುಳಿತುಕೊಳ್ಳುವ ಮೂಲಕ ಅಪಹಾಸ್ಯಕ್ಕೀಡಾಗಿದ್ದಾರೆ.

ತಮ್ಮ ತಪ್ಪಿನ ಅರಿವಾದ ಬಳಿಕ ಇಮ್ರಾನ್ ಖಾನ್ ತಮ್ಮ ಸ್ಥಾನದಿಂದ ಮೇಲೆದ್ದು ಇತರ ನಾಯಕರನ್ನು ಸ್ವಾಗತಿಸಿದರು. ಈ ಹಿಂದೆ ಸೌದಿ ಅರೆಬಿಯಾದಲ್ಲಿ ನಡೆದ 14ನೇ ಒಐಸಿ ಶಂಗಸಭೆಯಲ್ಲೂ ಖಾನ್ ರಾಜತಾಂತ್ರಿಕ ಶಿಷ್ಟಾಚಾರ ಮುರಿದಿದ್ದನ್ನು ಇಲ್ಲಿ ಸ್ಮರಿಸಬಹುದು.