ನವದೆಹಲಿ[ಆ.16]  ವಾಜಪೇಯಿ ಅವರೊಂದಿಗೆ ಭಾರತದ ಅನೇಕ ಪತ್ರಕರ್ತರು ಬಸ್ ನಲ್ಲಿ ಲಾಹೋರ್ ಗೆ ತೆರಳಿದ್ದರು. ವಾಜಪೇಯಿ ಪಾಕಿಸ್ತಾನದಲ್ಲೂ ತಮ್ಮ ಮಾತಿನ ಚಾತುರ್ಯ ತೋರಿಸಿದ್ದರು. ಇದಾದ ಮೇಲೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಮಾತನಾಡಿದ್ದರು. ಒಂದು ವೇಳೆ ಪಾಕಿಸ್ತಾನದಲ್ಲಿ ವಾಜಪೇಯಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ ಎಂದು ಬಣ್ಣಿಸಿದ್ದರು. ಅಂದರೆ ನೀವೇ  ಊಹಿಸಿ...

ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ

ವಾಜಪೇಯಿ ಕುರಿತಾಗಿ ಅವರ ಜೀವನದ ಕುರಿತಾಗಿ ಸುಧೀಂದ್ರ ಕುಲಕರ್ಣಿ ನೆನಪು ಮಾಡಿಕೊಂಡ ವೇಳೆ ಈ ವಿಚಾರ ಗೊತ್ತಾಗುತ್ತದೆ. 1957ರಲ್ಲಿಯೇ ಸಂದತ್ ಪ್ರವೇಶ ಮಾಡಿದ್ದ ವಾಜಪೇಯಿ ಅವರನ್ನು ಇದೇ ಕಾರಣಕ್ಕೆ ಅಜಾತ ಶತ್ರು ಎಂದು ಕರೆಯುವುದು.

ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಸ್ ಸಂಚಾರ ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಬರೆದಿತ್ತು. ಸ್ವಾತಂತ್ರ್ಯಾ ನಂತರ ಎರಡು ದೇಶಗಳ ನಡುವಿನ ಅತಿದೊಡ್ಡ ಮೈತ್ರಿ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು.