ಈ ಯೋಜನೆಯಡಿಯಲ್ಲಿ  ಪ್ರತಿ ಕೆಜಿ ಅಕ್ಕಿಗೆ 3 ರೂ.ಗೋಧಿಗೆ 2 ರೂ. ಹಾಗೂ ಏಕದಳ ಪದಾರ್ಥಗಳಿಗೆ ಪ್ರತಿ ಕೆಜಿಗೆ 1 ರೂ. ದರದಲ್ಲಿ ನೀಡಲಾಗುತ್ತಿದೆ.

ನವದೆಹಲಿ(ಆ.01): ದೇಶದ 81 ಕೋಟಿ ಮಂದಿಗೆ ರಿಯಾಯಿತಿ ದರದಲ್ಲಿ 2 ರೂ.ಗೆ ಗೋಧಿ ಹಾಗೂ 3 ರೂ.ಗೆ ಅಕ್ಕಿ ನೀಡುತ್ತಿರುವ ಯೋಜನೆಯನ್ನು 2018ರವರೆಗೆ ಮುಂದುವರಿಸಲಾಗುವುದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್'ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭೆಯಲ್ಲಿ ಪ್ರಶ್ನಾವಳಿ ವೇಳೆಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್'ಎಫ್'ಎಸ್ಎ)2013ರ ಪ್ರಕಾರ ಪ್ರತಿ 3 ವರ್ಷಗಳಿಗೊಮ್ಮೆ ಆಹಾರಪದಾರ್ಥ'ಗಳ ಬೆಲೆಗಳನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ಆದಾಗ್ಯೂ ನಾವು ಪ್ರಸ್ತುತ ಯೋಜನೆಯನ್ನು 2018ರವರೆಗೂ ಮುಂದುವರಿಸಲು ನಿರ್ಧರಿಸಿದ್ದೇವೆ.

ಈ ಯೋಜನೆಯಡಿಯಲ್ಲಿ ಪ್ರತಿ ಕೆಜಿ ಅಕ್ಕಿಗೆ 3 ರೂ.ಗೋಧಿಗೆ 2 ರೂ. ಹಾಗೂ ಏಕದಳ ಪದಾರ್ಥಗಳಿಗೆ ಪ್ರತಿ ಕೆಜಿಗೆ 1 ರೂ. ದರದಲ್ಲಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಅತ್ಯುತ್ತಮ ಯೋಜನೆ ಜಾರಿಗೊಳಿಸಿದ್ದು, ಯಾರೊಬ್ಬರನ್ನು ಉಪವಾಸದಿಂದ ಇರಿಸಬಾರದೆಂಬ ಜವಾಬ್ದಾರಿ ರಾಜ್ಯ ಸರ್ಕಾರಗಳಾದ್ದಾಗಿದೆ.