ತಿರುವನಂತಪುರಂ: ತಿರುವನಂತಪುರ: ಕೇರಳದಲ್ಲಿ ಮಳೆ ಹಾಗೂ ಪ್ರವಾಹ ತಗ್ಗಿದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಕೇರಳದಲ್ಲಿ ಉಂಟಾದ ಪ್ರವಾಹ ಸ್ಥಿತಿ ಮಾನವ ನಿರ್ಮಿತ ಎಂದು ದೂಷಿಸಿರುವ ಪ್ರತಿಪಕ್ಷಗಳು, ಮುನ್ಸೂಚನೆ ನೀಡದೇ ಏಕಕಾಲಕ್ಕೆ 44 ಅಣೆಕಟ್ಟೆಗಳ ಗೇಟುಗಳನ್ನು ತೆರೆದಿದ್ದರಿಂದಲೇ ಪ್ರವಾಹ ಉಂಟಾಗಿದೆ ಎಂದು ವಾಕ್‌ಪ್ರಹಾರ ನಡೆಸಿವೆ. ಆದರೆ ಸರ್ಕಾರಿ ಸಂಸ್ಥೆಗಳು ಈ ಆಪಾದನೆಯನ್ನು ತಿರಸ್ಕರಿಸಿವೆ.

ನೀರು ಬಿಡುಗಡೆ ಮಾಡಿದರೆ ಯಾವೆಲ್ಲಾ ಪ್ರದೇಶಗಳು ಮುಳುಗಡೆಯಾಗುತ್ತವೆ ಎಂಬ ಅರಿವಿಲ್ಲದೇ ಸರ್ಕಾರ 44 ಡ್ಯಾಂಗಳ ಗೇಟು ಗಳನ್ನು ಏಕಕಾಲಕ್ಕೆ ತೆರೆಸಿದೆ. ಮಳೆ ಹೆಚ್ಚಾದ ಕಾರಣಕ್ಕೆ ಮಾತ್ರವೇ ಪರಿಸ್ಥಿತಿ ಭೀಕರವಾಗಿಲ್ಲ. ಯಾವುದೇ ಮುನ್ಸೂಚನೆ ನೀಡದೇ 44 ಡ್ಯಾಂಗಳಿಂದ ನೀರು ಬಿಟ್ಟಿದ್ದರಿಂದಲೇ ಅನಾಹುತಗಳು ಆಗಿವೆ ಎಂದು ಕೇರಳದಲ್ಲಿನ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ದೂರಿದ್ದಾರೆ. 

ಕೇರಳ  ಜಲಪ್ರಳಯಕ್ಕೆ ರಾಜ್ಯ ಸರ್ಕಾರವೇ ಕಾರಣ. ಮುನ್ನೆಚ್ಚರಿಕೆಯ ಕೊರತೆ ಈ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಟೀಕಿಸಿದ್ದಾರೆ. ಕೇರಳದಲ್ಲಿ ಡ್ಯಾಂಗಳ ಒಡೆತನ ಹೊಂದಿರುವ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ವಿಪಕ್ಷಗಳ ಈ ಆರೋಪವನ್ನು ನಿರಾಕರಿಸಿದೆ. 

ಭಾರಿ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದವು. ಹೀಗಾಗಿ ಮುನ್ಸೂಚನೆ ನೀಡಿಯೇ  ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಂಡಳಿಯ ಅಧ್ಯಕ್ಷ ಕೆ.ಪಿ. ಶ್ರೀಧರನ್ ನಾಯರ್ ತಿಳಿಸಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷಗಳ ಆರೋಪವೇ ಆಧಾರರಹಿತ. ಜಲಾಶಯಗಳಲ್ಲಿ ನೀರಿನ ಮಟ್ಟ ಏರುತ್ತಿತ್ತು, ನದಿಗಳು ಅಪಾಯ ಮಟ್ಟ ಮೀರಿದ್ದವು ಎಂಬುದು ಎಲ್ಲರಿಗೂ 

ಕೇರಳ ನೆರೆ ಪರಿಹಾರಕ್ಕೆ 700 ಕೋಟಿ ರು. ನೆರವು ನೀಡುವ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಪ್ರಸ್ತಾಪ ಈಗ ಭಾರೀ ಚರ್ಚೆ, ವಿವಾದಕ್ಕೆ ಕಾರಣವಾಗಿದೆ. ಯುಎಇ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ ಎಂಬ ವರದಿ ಗಳ ನಡುವೆಯೇ ಈ ಬಗ್ಗೆ ತಾವು ಕೇಂದ್ರದ ಜತೆ ಮಾತುಕತೆ ನಡೆಸುವು ದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ವೇಳೆ, ಭಾರತ ಸರ್ಕಾರ ಹಣಕಾಸು ನೆರವು ತಿರಸ್ಕರಿಸಿದೆ ಎಂದು ಥಾಯ್ಲೆಂಡ್ ರಾಯಭಾರಿಯೊಬ್ಬರು ಹೇಳಿಕೊಂಡಿದ್ದಾರೆ. 

ಈ ಸಂದರ್ಭದಲ್ಲೇ ಪ್ರತಿಕ್ರಿಯಿಸಿರುವ ಕೇರಳ ಹಣಕಾಸು ಸಚಿವರು, ಕೇಂದ್ರ ಸರ್ಕಾರ ತಾನೂ ಕೊಡಲ್ಲ. ವಿದೇಶಗಳು ಕೊಡುವ ನೆರವನ್ನೂ ಸ್ವೀಕ ರಿಸುವುದಿಲ್ಲ ಎಂದರೆ ನಮಗೆ ಪರಿಹಾರ ಕೈಗೊಳ್ಳಲು ಹಣ ಎಲ್ಲಿಂದ ಬರುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

700 ಕೋಟಿ ರು. ಅರಬ್ ನೆರವು ಬಗ್ಗೆ ಚರ್ಚೆ, ವಿವಾದ ವಿದೇಶಿ ನೆರವು ಬೇಡ ಎನ್ನಲು ಏನು ಕಾರಣ? 8 ಗೊತ್ತಿರುವ ವಿಚಾರ. ಯಾರನ್ನೋ ದೂಷಿಸುವ ಸಲುವಾಗಿ ಈಗ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಣೆಕಟ್ಟೆ ಸುರಕ್ಷತೆ ಮುಖ್ಯಸ್ಥ ಸಿ.ಎನ್. ರಾಮಚಂದ್ರನ್ ನಾಯರ್ ಹೇಳಿದ್ದಾರೆ.

700 ಕೋಟಿ ಚರ್ಚೆ

ಕೇರಳ ನೆರೆ ಪರಿಹಾರಕ್ಕೆ 700 ಕೋಟಿ ರು. ನೆರವು ನೀಡುವ ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಪ್ರಸ್ತಾಪ ಈಗ ಭಾರೀ ಚರ್ಚೆ, ವಿವಾದಕ್ಕೆ ಕಾರಣವಾಗಿದೆ. ಯುಎಇ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿಕ್ಕಿಲ್ಲ ಎಂಬ ವರದಿಗಳ ನಡುವೆಯೇ ಈ ಬಗ್ಗೆ ತಾವು ಕೇಂದ್ರದ ಜತೆ ಮಾತುಕತೆ ನಡೆಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಇದೇ ವೇಳೆ, ಭಾರತ ಸರ್ಕಾರ ಹಣಕಾಸು ನೆರವು ತಿರಸ್ಕರಿಸಿದೆ ಎಂದು ಥಾಯ್ಲೆಂಡ್‌ ರಾಯಭಾರಿಯೊಬ್ಬರು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಪ್ರತಿಕ್ರಿಯಿಸಿರುವ ಕೇರಳ ಹಣಕಾಸು ಸಚಿವರು, ಕೇಂದ್ರ ಸರ್ಕಾರ ತಾನೂ ಕೊಡಲ್ಲ. ವಿದೇಶಗಳು ಕೊಡುವ ನೆರವನ್ನೂ ಸ್ವೀಕರಿಸುವುದಿಲ್ಲ ಎಂದರೆ ನಮಗೆ ಪರಿಹಾರ ಕೈಗೊಳ್ಳಲು ಹಣ ಎಲ್ಲಿಂದ ಬರುತ್ತದೆ ಎಂದು ತೀಕ್ಷ$್ಣವಾಗಿ ಹೇಳಿದ್ದಾರೆ.

ವಿದೇಶಿ ನೆರವು ಬೇಡ  ಎನ್ನಲು ಏನು ಕಾರಣ?

ತಿರುವನಂತಪುರ: ಕೇರಳದಲ್ಲಿ ಮಳೆ ಹಾಗೂ ಪ್ರವಾಹ ತಗ್ಗಿದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಕೇರಳದಲ್ಲಿ ಉಂಟಾದ ಪ್ರವಾಹ ಸ್ಥಿತಿ ಮಾನವ ನಿರ್ಮಿತ ಎಂದು ದೂಷಿಸಿರುವ ಪ್ರತಿಪಕ್ಷಗಳು, ಯಾವುದೇ ಮುನ್ಸೂಚನೆ ನೀಡದೇ ಏಕಕಾಲಕ್ಕೆ 44 ಅಣೆಕಟ್ಟೆಗಳ ಗೇಟುಗಳನ್ನು ತೆರೆದಿದ್ದರಿಂದಲೇ ಪ್ರವಾಹ ಉಂಟಾಗಿದೆ ಎಂದು ಸರ್ಕಾರದ ವಿರುದ್ಧ ವಾಕ್‌ಪ್ರಹಾರ ನಡೆಸಿವೆ. ಆದರೆ ಸರ್ಕಾರಿ ಸಂಸ್ಥೆಗಳು ಈ ಆಪಾದನೆಯನ್ನು ತಿರಸ್ಕರಿಸಿವೆ.

ನೀರು ಬಿಡುಗಡೆ ಮಾಡಿದರೆ ಯಾವೆಲ್ಲಾ ಪ್ರದೇಶಗಳು ಮುಳುಗಡೆಯಾಗುತ್ತವೆ ಎಂಬ ಅರಿವಿಲ್ಲದೇ ರಾಜ್ಯ ಸರ್ಕಾರ ಒಟ್ಟು 44 ಡ್ಯಾಂಗಳ ಗೇಟುಗಳನ್ನು ಏಕಕಾಲಕ್ಕೆ ತೆರೆಸಿದೆ. ಮಳೆ ಹೆಚ್ಚಾದ ಕಾರಣಕ್ಕೆ ಮಾತ್ರವೇ ಪರಿಸ್ಥಿತಿ ಭೀಕರವಾಗಿಲ್ಲ. ಯಾವುದೇ ಮುನ್ಸೂಚನೆ ನೀಡದೇ 44 ಡ್ಯಾಂಗಳಿಂದ ನೀರು ಬಿಟ್ಟಿದ್ದರಿಂದಲೇ ಅನಾಹುತಗಳು ಆಗಿವೆ ಎಂದು ಕೇರಳದಲ್ಲಿನ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಮೇಶ್‌ ಚೆನ್ನಿತ್ತಲ ದೂರಿದ್ದಾರೆ.

ಕೇರಳದಲ್ಲಿ ಉಂಟಾದ ಜಲಪ್ರಳಯಕ್ಕೆ ಪಿಣರಾಯಿ ವಿಜಯನ್‌ ಸರ್ಕಾರವೇ ಕಾರಣ. ಮುನ್ನೆಚ್ಚರಿಕೆಯ ಕೊರತೆ ಈ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೈ ಟೀಕಿಸಿದ್ದಾರೆ.

ಕೇರಳದಲ್ಲಿ ಡ್ಯಾಂಗಳ ಒಡೆತನ ಹೊಂದಿರುವ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ವಿಪಕ್ಷಗಳ ಈ ಆರೋಪವನ್ನು ನಿರಾಕರಿಸಿದೆ. ಭಾರಿ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದವು. ಹೀಗಾಗಿ ಮುನ್ಸೂಚನೆ ನೀಡಿಯೇ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಂಡಳಿಯ ಅಧ್ಯಕ್ಷ ಕೆ.ಪಿ. ಶ್ರೀಧರನ್‌ ನಾಯರ್‌ ತಿಳಿಸಿದ್ದಾರೆ.

ಮತ್ತೊಂದೆಡೆ, ಪ್ರತಿಪಕ್ಷಗಳ ಆರೋಪವೇ ಆಧಾರರಹಿತ. ಜಲಾಶಯಗಳಲ್ಲಿ ನೀರಿನ ಮಟ್ಟಏರುತ್ತಿತ್ತು, ನದಿಗಳು ಅಪಾಯ ಮಟ್ಟಮೀರಿದ್ದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾರನ್ನೋ ದೂಷಿಸುವ ಸಲುವಾಗಿ ಈಗ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಣೆಕಟ್ಟೆಸುರಕ್ಷತೆ ಮುಖ್ಯಸ್ಥ ಸಿ.ಎನ್‌. ರಾಮಚಂದ್ರನ್‌ ನಾಯರ್‌ ಹೇಳಿದ್ದಾರೆ.