ವಿಧಾನಸೌಧ ಪ್ರವೇಶ ಮಾಡಿದ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ

First Published 17, May 2018, 10:07 AM IST
Karnataka Govt Formation : BSY Sworn as CM
Highlights

ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಧಾನ ಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿಕೊಂಡು ಯಡಿಯೂರಪ್ಪ ಅವರು ಪ್ರವೇಶ ಮಾಡಿದ್ದಾರೆ. 

ಬೆಂಗಳೂರು [ಮೇ 17] : ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಧಾನ ಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿಕೊಂಡು ಯಡಿಯೂರಪ್ಪ ಅವರು ಪ್ರವೇಶ ಮಾಡಿದ್ದಾರೆ. 

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಇದ್ದ ಸಿದ್ದರಾಮಯ್ಯ ಹೆಸರಿನ ನಾಮಫಲಕವನ್ನು ಸಿಬ್ಬಂದಿ ಬದಲಾಯಿಸಿದ್ದಾರೆ. ಯಡಿಯೂರಪ್ಪ ಹೆಸರಿನ ಬೋರ್ಡ್ ಹಾಕಿದ್ದಾರೆ. 

 ಕರ್ನಾಟಕ ಸಿಎಸ್ ರತ್ನಪ್ರಭ ಮುಖ್ಯಮಂತ್ರಿ  ಕಚೇರಿಗೆ ತೆರಳಿದ್ದು, ನಿಯಮದತೆ  ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ  ಸ್ವಾಗತ ಕೋರಿದ್ದಾರೆ. 

loader