ಏಮ್ಸ್ ಡಾಕ್ಟರ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಂತೆ ಹೇಳಿದೆ. ಯಾವ ಪ್ರಮಾಣದಲ್ಲಿ ವೈದ್ಯರಿಗೆ ಒತ್ತಡ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ಪತ್ರದಲ್ಲಿ ತಿಳಿಸಿದ್ದಾರೆ.
ನವದೆಹಲಿ (ಡಿ.24): ಏಮ್ಸ್ ಡಾಕ್ಟರ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಂತೆ ಹೇಳಿದೆ. ಯಾವ ಪ್ರಮಾಣದಲ್ಲಿ ವೈದ್ಯರಿಗೆ ಒತ್ತಡ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ಪತ್ರದಲ್ಲಿ ತಿಳಿಸಿದ್ದಾರೆ.
ಬಡ್ತಿ ಹಾಗೂ ಹೆಚ್ಚಿನ ವೇತನಕ್ಕಾಗಿ ಪ್ರತಿಭಟನೆ ನಡೆಸಿದ್ದ ರಾಜಸ್ಥಾನದ ವೈದ್ಯರ ಸಹಕಾರದೊಂದಿಗೆ ಈ ಪತ್ರವನ್ನು ಬರೆದಿದ್ದಾರೆ.
ನಾವು ನಿಮ್ಮ ರೀತಿಯ ಆಕ್ಟಿವ್ ಪ್ರಧಾನಿ ಹೊಂದಿರುವುದು ನಮ್ಮ ಅದೃಷ್ಟವಾಗಿದೆ. ನೀವು ಬಿಳಿ ಏಪ್ರಾನ್ ಹಾಕಿಕೊಂಡು ಒಂದು ದಿನ ನಮ್ಮೊಂದಿಗೆ ಕಳೆಯಿರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಲ್ಲಿರುವ ಕಳಪೆ ಸೌಕರ್ಯಗಳನ್ನೇ ಬಳಸಿಕೊಂಡು ಹೇಗೆ ಕೆಲಸ ನಿರ್ವಹಿಸಬೇಕು ಹಾಗೂ ಕೆಲವುಯ ರೋಗಿಗಳು ನಡೆದುಕೊಳ್ಳುವ ರೀತಿಯನ್ನೂ ಕೂಡ ನಾವು ಸಹಿಸಿಕೊಳ್ಳಬೇಕು ಎನ್ನುವುದು ಆಗ ತಿಳಿಯುತ್ತದೆ ಎಂದು ಹೇಳಿದ್ದಾರೆ.
