ಆಂಧ್ರವು ಶ್ರೀ ಶೈಲ ಅಣೆಕಟ್ಟೆ ಯಿಂದ ತೆಲಂಗಾಣದ ನಾಗಾರ್ಜುನ ಸಾಗರ ಅಣಕಟ್ಟೆಗೆ 195 ಟಿಎಂಸಿ ನೀರು ಬಿಡುಗಡೆ ಮಾಡಿತ್ತು. ಆದರೆ ಈ ಪೈಕಿ ನಾಗಾರ್ಜುನ ಸಾಗರ ಅಣೆಕಟ್ಟೆಗೆ ಬಂದ ನೀರಿನ ಪ್ರಮಾಣ 151 ಟಿಎಂಸಿ ಮಾತ್ರ.

ಹೈದರಾಬಾದ್(ನ.28) ಸೆ. 10 ರಿಂದ ಅ.30ರವರೆಗೆ ಆಂಧ್ರಪ್ರದೇಶವು ತೆಲಂಗಾಣಕ್ಕೆ ಬಿಟ್ಟ ಒಟ್ಟಾರೆ 195 ಟಿಎಂಸಿ ನೀರಿನ ಪೈಕಿ 44 ಟಿಎಂಸಿ ನೀರು ‘ನಾಪತ್ತೆ’ಯಾದ ವಿಚಿತ್ರ ವಿದ್ಯಮಾನ ನಡೆದಿದೆ.

ಈ ಅವಧಿಯಲ್ಲಿ ಆಂಧ್ರವು ಶ್ರೀ ಶೈಲ ಅಣೆಕಟ್ಟೆ ಯಿಂದ ತೆಲಂಗಾಣದ ನಾಗಾರ್ಜುನ ಸಾಗರ ಅಣಕಟ್ಟೆಗೆ 195 ಟಿಎಂಸಿ ನೀರು ಬಿಡುಗಡೆ ಮಾಡಿತ್ತು. ಆದರೆ ಈ ಪೈಕಿ ನಾಗಾರ್ಜುನ ಸಾಗರ ಅಣೆಕಟ್ಟೆಗೆ ಬಂದ ನೀರಿನ ಪ್ರಮಾಣ 151 ಟಿಎಂಸಿ ಮಾತ್ರ. ಮಾರ್ಗ ಮಧ್ಯೆ 10 ಟಿಎಂಸಿ ನೀರು ಆವಿಯಾಯಿತು ಎಂದು ಸುಮ್ಮನಾಗಬಹುದಾದರೂ ಇನ್ನುಳಿದ 34 ಟಿಎಂಸಿ ನೀರು ಎಲ್ಲಿ ಹೋಯಿತು ಎಂದು ನಾಗಾರ್ಜುನಸಾಗರ ಮುಖ್ಯ ಎಂಜಿನಿಯರ್ ಸುನೀಲ್ ಪ್ರಶ್ನಿಸಿದ್ದಾರೆ.