ಬೆಂಗಳೂರು(ಸೆ.25): ವಾರ್ಡ್ ಮಟ್ಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವನ್ನು ಸಂಸ್ಕರಿಸಲು ಶೀಘ್ರದಲ್ಲಿ ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ  ಬಿ.ಎಚ್. ಅನಿಲ್ ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತ್ಯಾಜ್ಯ ಸಂಸ್ಕರಣಾ ಘಟಕದ ಮೇಲಿನ ಒತ್ತಡ ಕಡಿಮೆ ಮಾಡುವುದು ಮತ್ತು ತ್ಯಾಜ್ಯ ವಿಲೇವಾರಿ ವೆಚ್ಚ ತಗ್ಗಿಸುವ ಉದ್ದೇಶದಿಂದ ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ವಾರ್ಡ್ ಮಟ್ಟದಲ್ಲಿ ಪಾರ್ಕ್‌ಗಳ ಬಳಿ ಸಣ್ಣ ಪ್ರಮಾಣ ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಕೆಗೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ವಾರ್ಡ್‌ನಲ್ಲಿ ಸಂಗ್ರಹವಾಗುವ ಹಸಿ ಕಸ ಅಲ್ಲೇ ಸಂಸ್ಕರಣೆಯಾಗಲಿದೆ. ಈಗಾಗಲೇ ಎಚ್‌ಎಸ್‌ಆರ್ ಲೇಔಟ್‌ನ ಕಲಿಕಾ ಕೇಂದ್ರದಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್ ಭವಿಷ್ಯ ಬಿಎಸ್‌ವೈ ಕೈಯಲ್ಲಿ..!

ಪಾಲಿಕೆ ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ತ್ಯಾಜ್ಯ ವಿಂಗಡಣೆಗೆ  ಹೆಚ್ಚಿನ ಒತ್ತು ನೀಡಬೇಕಾಗಿದೆ. ತ್ಯಾಜ್ಯ ವಿಲೇವಾರಿ ಹೊಸ ನೀತಿ ಜಾರಿಗೆ ಬಂದರೆ ಕಡ್ಡಾಯವಾಗಿ ಸಾರ್ವಜನಿಕರು ಕಸ ವಿಂಗಡಿಸಿ ನೀಡಲಿದ್ದಾರೆ. ಇಲ್ಲಿದ್ದರೆ ದಂಡ ಕಟ್ಟಬೇಕು ಎಂದರು.

ಕಾರ್ಡ್‌ನಲ್ಲಿ ಕಸ ವಿಂಗಡಿಸಿದ ಮಾಹಿತಿ!

ಸಮರ್ಪಕ ಕಸ ವಿಲೇವಾರಿಗೆ ಬಿಬಿಎಂಪಿ ಶೀಘ್ರದಲ್ಲಿ ಸ್ಮಾರ್ಟ್ ಕಂಟ್ರೋಲ್ ರೂಂ ತೆರೆಯಲಾಗುವುದು, ಮನೆಗಳಿಂದ ತ್ಯಾಜ್ಯ ಸಂಗ್ರಹದ ವಿವರವನ್ನು ನಮೂದಿಸಲು ಮನೆಗಳಲ್ಲಿ RIFD ಕಾರ್ಡ್ ಅಂಟಿಸಲಾಗುತ್ತದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳು ಮನೆಗಳಿಗೆ ಅಂಟಿಸಿರುವ ಕಾರ್ಡನ್ನು ಸ್ಕ್ಯಾನ್ ವಾಡಿ, ವಿಂಗಡಿಸಿದ ತ್ಯಾಜ್ಯ ಪಡೆದಿರುವ ಕುರಿತು ನಮೂ ದಿಸಲಾಗುವುದು. ಪ್ರಾಯೋಗಿಕವಾಗಿ 2-3 ವಾರ್ಡ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದರು. ಹೊಸ ಸ್ಥಾಯಿ ಸಮಿತಿ ಬಂದ ಬಳಿಕ ವಷ್ಟೇ ಕಸ ಟೆಂಡರ್ ಹಸಿ ತ್ಯಾಜ್ಯ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಅನರ್ಹ ಶಾಸಕರಿಗೆ ಈಗ ಹೊಸ ಆತಂಕ..!