ಅವಧಿಗೆ ಮುನ್ನ ಗರ್ಭ ಧರಿಸಿದ ಮಹಿಳೆ ಕೆಲಸದಿಂದ ಗೇಟ್‌ಪಾಸ್‌!

First Published 9, Apr 2018, 8:13 AM IST
Was Pregnancy a mistake Japanese Women face Problem
Highlights

ಯಾರಾದರೂ ಗರ್ಭ ಧರಿಸಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪರಿಪಾಠ ಇರಲು ಸಾಧ್ಯವೇ? ಖಂಡಿತಾ ಇಲ್ಲ.

ಯಾರಾದರೂ ಗರ್ಭ ಧರಿಸಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪರಿಪಾಠ ಇರಲು ಸಾಧ್ಯವೇ? ಖಂಡಿತಾ ಇಲ್ಲ.

ಆದ್ರೆ, ಮಹಿಳೆಯೊಬ್ಬರು ಗರ್ಭ ಧರಿಸಿದ್ದಾರೆ ಎಂಬ ಕಾರಣಕ್ಕೆ ಆಕೆಯನ್ನು ಸಂಸ್ಥೆಯ ಬಾಸ್‌, ಕೆಲಸದಿಂದ ತೆಗೆದು ಹಾಕಿರುವ ವಿಚಿತ್ರ ಘಟನೆ ಜಪಾನ್‌ನಲ್ಲಿ ನಡೆದಿದೆ.

ಅಸಲಿಗೆ ಆಗಿದ್ದೇನು ಅಂದ್ರೆ, ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಮದುವೆಯಾಗಲು ಮತ್ತು ಮಕ್ಕಳನ್ನು ಹೆರಲು ಸಂಸ್ಥೆಯೇ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟಿದೆ.

ಆದ್ರೆ, ಆಕೆಯ ಸರದಿ ಬರುವ ಮುನ್ನವೇ ಮಹಿಳೆ ಗರ್ಭ ಧರಿಸಿದ್ದಕ್ಕೆ, ಆಕೆ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾಳೆ ಎಂಬ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆಯಂತೆ.

loader