ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಕೇರಳದ ಮಹಿಳೆ ಹಾದಿಯಾ, ತಾನು ಬಲವಂತವಾಗಿ ಮತಾಂತರ ಹೊಂದಿಲ್ಲ, ತಾನು ಪತಿ ಶಫೀನ್ ಜಹಾನ್ ಜೊತೆ ಇರಬಯಸುತ್ತೇನೆ  ಎಂದು ಹೇಳಿದ್ದಾರೆ.

ನವದೆಹಲಿ: ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಕೇರಳದ ಮಹಿಳೆ ಹಾದಿಯಾ, ತಾನು ಬಲವಂತವಾಗಿ ಮತಾಂತರ ಹೊಂದಿಲ್ಲ, ತಾನು ಪತಿ ಶಫೀನ್ ಜಹಾನ್ ಜೊತೆ ಇರಬಯಸುತ್ತೇನೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಹಿಂದು ಧರ್ಮೀಯಳಾದ ಅಖಿಲಾ ಅಲಿಯಾಸ್ ಹಾದಿಯಾ, ‘ನಾನು ಮುಸ್ಲಿಂ. ನಾನು ಬಲವಂತದ ಮತಾಂತರ ಅಗಿಲ್ಲ. ನಾನು ನನ್ನ ಪತಿಯ ಜತೆಗೇ ಇರಬಯಸುವೆ’ ಎಂದು ಹಾದಿಯಾ ಹೇಳಿದ್ದಾರೆ.

ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿಪಡಿಸಿದ ಕೋರ್ಟ್, ಹಾದಿಯಾಳನ್ನು ಕಾಲೇಜಿಗೆ ಕಳುಹಿಸುವಂತೆ ಪೋಷಕರಿಗೆ ಸೂಚಿಸಿದೆ. ಹಾಗೂ ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ಕಾಲೇಜಿನ ಡೀನ್’ಗೆ ಸೂಚಿಸಿದೆ. ಪ್ರಕರಣ ಮುಗಿಯುವವರೆಗೆ ಕಾಲೇಜಿನ ಡೀನ್ ಆಕೆಯ ಪೋಷಕರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.

ಹಾದಿಯಾ ಪ್ರಕರಣವು ನಿಜವಾಗಿಯೂ ಲವ್ ಜಿಹಾದ್ ಹೌದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ತನ್ನ ಮುಂದೆ ನ.27ರಂದು ಖುದ್ದು ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ಪೀಠ ಆದೇಶಿಸಿತ್ತು.

ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿಹಿಡಿದಿದೆ, ಅದರ ನಿರ್ಧಾರವು ಸಂತೋಷ ತಂದಿದೆ, ಎಂದು ಪತಿ ಶಫೀನ್ ಜಹಾನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.