ಹಣವಿಲ್ಲದೆ ವಿಟಿಯು ಮುಚ್ಚುವ ಸ್ಥಿತಿಯಲ್ಲಿದೆ. ಹಾಗಾಗಿ ಪರೀಕ್ಷಾ ಶುಲ್ಕ ಹೆಚ್ಚಿಸಬೇಕಾಯಿತು. ಇಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಇದರ ಜತೆಗೆ ಕೇಂದ್ರ ಸರ್ಕಾರ 441 ಕೋಟಿ ರು. ಆದಾಯ ತೆರಿಗೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸರ್ಕಾರಿ ವಿಶ್ವವಿದ್ಯಾಲವೊಂದರ ಆದಾಯ ತೆರಿಗೆ ಮುಟ್ಟುಗೋಲು ಹಾಕಿಕೊಂಡ ಪ್ರಕರಣದ ದೇಶದಲ್ಲೇ ಇದೇ ಮೊದಲು.

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಹಣಕಾಸಿನ ಕೊರತೆಯಿಂದ ದಿವಾಳಿಯಾಗಿದ್ದು, ಮುಚ್ಚುವ ಸ್ಥಿತಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಸಿಇಟಿ ಫಲಿತಾಂಶ ಬಿಡುಗಡೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. 

ಹಣವಿಲ್ಲದೆ ವಿಟಿಯು ಮುಚ್ಚುವ ಸ್ಥಿತಿಯಲ್ಲಿದೆ. ಹಾಗಾಗಿ ಪರೀಕ್ಷಾ ಶುಲ್ಕ ಹೆಚ್ಚಿಸಬೇಕಾಯಿತು. ಇಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಇದರ ಜತೆಗೆ ಕೇಂದ್ರ ಸರ್ಕಾರ 441 ಕೋಟಿ ರು. ಆದಾಯ ತೆರಿಗೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸರ್ಕಾರಿ ವಿಶ್ವವಿದ್ಯಾಲವೊಂದರ ಆದಾಯ ತೆರಿಗೆ ಮುಟ್ಟುಗೋಲು ಹಾಕಿಕೊಂಡ ಪ್ರಕರಣದ ದೇಶದಲ್ಲೇ ಇದೇ ಮೊದಲು. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದೆಲ್ಲದರಿಂದ ವಿಟಿಯು ದಿವಾಳಿಯಾಗಿ ಬಾಗಿಲು ಹಾಕುವ ಸ್ಥಿತಿ ತಲುಪಿದೆ ಎಂದು ಸಚಿವರು ಹೇಳಿದರು. ಈ ಸಂಬಂಧ ಚರ್ಚೆಗೆ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅವರೊಂದಿಗೆ ಬುಧವಾರ ಸಭೆ ಕರೆಯಲಾಗಿದೆ ಎಂದರು.

ಲಂಚ ಕೇಳಿದ ತಂಡದ ವಿರುದ್ಧ ಕ್ರಮ: ಬೆಂಗಳೂರಿನ ಎಎಂಸಿ ಎಂಜಿನಿಯರಿಂಗ್‌ ಕಾಲೇಜಿನ ಪರಿಶೀಲನೆಗೆ ಭೇಟಿ ನೀಡಿದ್ದ ವಿಟಿಯುನ ಸ್ಥಳೀಯ ವಿಚಾರಣಾ ಸಮಿತಿ ಅಧ್ಯಕ್ಷರು ಸಂಯೋಜನೆ ನವೀಕರಣಕ್ಕೆ ಶಿಫಾರಸು ಮಾಡಲು 25 ಲಕ್ಷ ರು. ಲಂಚ ಕೇಳಿರುವ ಆರೋಪ ಸಂಬಂಧ ಕುಲಪತಿಯಿಂದ ವಿವರಣೆ ಕೇಳಿದ್ದೇನೆ, ಇಂದು ಅಥವಾ ನಾಳೆ ವಿವರಣೆ ನೀಡುವ ಸಾಧ್ಯತೆ ಇದೆ. ವಿವರಣೆ ಆಧರಿಸಿ ಎಲ್‌ಐಸಿ ತಂಡದ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು. 

ಕನ್ನಡಪ್ರಭ ವಾರ್ತೆ
epaper.kannadaprabha.in