ವಿರಾಟ್ ಕೋಹ್ಲಿಗೆ ಐಪಿಎಲ್'ನಿಂದ ದೊಡ್ಡ ಶಾಕ್

Virat Kohli Fined Rs 12 Lakh
Highlights

ಬೌಲಿಂಗ್'ನಲ್ಲಿ ನಿಗದಿಪಡಿಸಿದ ಸಮಯಕ್ಕಿಂತ ಆರ್'ಸಿಬಿ ತಂಡ ಹೆಚ್ಚು ಸಮಯ ತೆಗೆದುಕೊಂಡಿತ್ತು. ಬೆಂಗಳೂರು ನೀಡಿದ 205 ರನ್'ಗಳ ಗುರಿಯನ್ನು ಧೋನಿ ಹಾಗೂ ರಾಯುಡು ಅವರ ಅಮೋಘ ಆಟದಿಂದ ಚೆನ್ನೈ ತಂಡ 19.4 ಓವರ್'ಗಳಲ್ಲಿ ಗುರಿ ತಲುಪಿತ್ತು.

ಮುಂಬೈ(ಏ.26): ಸತತ ಸೋಲಿನಿಂದ ಕಂಗೆಟ್ಟಿರುವ ಆರ್'ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್'ನಿಂದ ಮತ್ತೊಂದು ಶಾಕ್ ಎದುರಾಗಿದೆ.

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಐಪಿಎಲ್'ನ ನೀತಿ ಸಂಹಿತೆಯ ಪ್ರಕಾರ ಕನಿಷ್ಠ ರನ್ ರೇಟ್'ನ ಉಲ್ಲಂಘನೆಯಾಗಿದ್ದು ಈ ಕಾರಣದಿಂದ ದಂಡ ವಿಧಿಸಲಾಗಿದೆ.

ಈ ಆವೃತ್ತಿಯಲ್ಲಿ ದಂಡ ವಿಧಿಸಲ್ಪಟ್ಟ ಮೊದಲ ಆಟಗಾರ ಕೊಹ್ಲಿಯಾಗಿದ್ದಾರೆ. ಬೌಲಿಂಗ್'ನಲ್ಲಿ ನಿಗದಿಪಡಿಸಿದ ಸಮಯಕ್ಕಿಂತ ಆರ್'ಸಿಬಿ ತಂಡ ಹೆಚ್ಚು ಸಮಯ ತೆಗೆದುಕೊಂಡಿತ್ತು. ಬೆಂಗಳೂರು ನೀಡಿದ 205 ರನ್'ಗಳ ಗುರಿಯನ್ನು ಧೋನಿ ಹಾಗೂ ರಾಯುಡು ಅವರ ಅಮೋಘ ಆಟದಿಂದ ಚೆನ್ನೈ ತಂಡ 19.4 ಓವರ್'ಗಳಲ್ಲಿ ಗುರಿ ತಲುಪಿತ್ತು.

loader