ಅದರ ಕಣ್ಣುಗಳು ಮತ್ತು ಮುಖ ಭೂತದಂತೆ ಇದ್ದು, ಅದನ್ನು ಕಂಡು ವಿಚಲಿತರಾದ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ಕೊಟ್ಟಿದ್ದಾರಂತೆ.
ಆಗಷ್ಟೇ ಹುಟ್ಟುವ ಹಸುವಿನ ಕರು, ಮೇಕೆ ಮರಿ ಸೇರಿದಂತೆ ಇನ್ನಿತರ ಮರಿಗಳು ಬಿಗಿದಪ್ಪಿ ಮುದ್ದಾಡಬೇಕೆನ್ನುವಷ್ಟು ಮುದ್ದಾಗಿರುತ್ತವೆ. ಆದರೆ, ಅರ್ಜೆಂಟೀನಾದ ಸ್ಯಾನ್ ಲೂಯೀಸ್ ಪ್ರಾಂತ್ಯದಲ್ಲಿ ಗ್ಲಾಡಿಸ್ ಒವಿಡೊ ಅವರ ಮೇಕೆಗೆ ಜನಿಸಿರುವ ಮರಿ ನೋಡಲು ಭಯಾನಕವಾಗಿದೆಯಂತೆ. ಅದರ ಕಣ್ಣುಗಳು ಮತ್ತು ಮುಖ ಭೂತದಂತೆ ಇದ್ದು, ಅದನ್ನು ಕಂಡು ವಿಚಲಿತರಾದ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ಕೊಟ್ಟಿದ್ದಾರಂತೆ. ಮರಿ ಮೇಕೆಯ ತಲೆ ಮತ್ತು ಕಣ್ಣುಗಳು ಮಾತ್ರ ವಿಕಾರವಾಗಿದ್ದು, ಉಳಿದ ಭಾಗವೆಲ್ಲ ಸಾಮಾನ್ಯವಾಗಿದೆ. ದೆವ್ವದ ಕಣ್ಣುಗಳಂತೆ ಇರುವ ಮೇಕೆಯ ಫೋಟೊವನ್ನು ತೆಗೆದುಕೊಂಡಿರುವ ಗ್ಲಾಡಿ ಅವರ ಮೊಮ್ಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅವುಗಳು ವೈರಲ್ ಆಗಿವೆ.
