ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ೨೬ ಜನರು ಮೃತಪಟ್ಟ ನಂತರ ಭಾರತ-ಪಾಕ್ ವಾತಾವರಣ ಹದಗೆಟ್ಟಿದೆ. ಯುದ್ಧ ಭೀತಿಯ ನಡುವೆ ಪಾಕಿಸ್ತಾನಿ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್, ಯುದ್ಧವಾದರೆ ಇಂಗ್ಲೆಂಡಿಗೆ ಪಲಾಯನ ಮಾಡುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿಯವರನ್ನು ವ್ಯಂಗ್ಯವಾಡಿದ ಇವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾತಾವರಣ ಹದಗೆಟ್ಟಿದೆ. ಯಾರು ಯಾವಾಗ ಯುದ್ಧ ಸಾರುತ್ತಾರೋ? ಇಲ್ಲವೋ ಎಂಬ ಆತಂಕ ಸೃಷ್ಟಿ ಆಗಿದೆ. ಹೀಗಿರುವಾಗ ಪಾಕಿಸ್ತಾನದ ಸಂಸದರೊಬ್ಬರು ಭಾರತ-ಪಾಕ್‌ ನಡುವೆ ಯುದ್ಧ ಶುರುವಾದ್ರೆ ನಾನು ಇಂಗ್ಲೆಂಡ್‌ಗೆ ಓಡಿಹೋಗುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್‌ಗೆ ಹೋಗ್ತೀನಿ!
ಪತ್ರಕರ್ತರೊಬ್ಬರು ಭಾರತದೊಂದಿಗೆ ಯುದ್ಧವಾದರೆ ಗಡಿಗೆ ಬಂದೂಕು ಹಿಡಿದು ಹೋಗುತ್ತೀರಾ? ಎಂದು ಶೇರ್ ಅಫ್ಜಲ್ ಖಾನ್ ಮಾರ್ವತ್ ಅವರಿಗೆ ಪ್ರಶ್ನೆ ಕೇಳಿದ್ದರು. ಆಗ ಅವರು “ಭಾರತದೊಂದಿಗೆ ಯುದ್ಧ ಶುರುವಾದರೆ ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ” ಎಂದು ಉತ್ತರ ನೀಡಿದ್ದಾರೆ. ಈ ಉತ್ತರ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿತ್ತು. 

ಮೋದಿ ನನ್ನ ಚಿಕ್ಕಮ್ಮನ ಮಗನಾ? 
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಎರಡು ದೇಶಗಳ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಯೋಚಿಸಿ, ಹಿಂದೆ ಸರಿಯಬೇಕೇ ಎಂದು ಪ್ರಶ್ನೆ ಮಾಡಿದ್ದರು. ಆಗ ಅವರು “ನಾನು ಹೇಳಿದೆ ಅಂತ ಸರಿಯೋಕೆ ಮೋದಿ ನನ್ನ ಚಿಕ್ಕಮ್ಮನ ಮಗನೇ ಎಂದು ವ್ಯಂಗ್ಯ ಮಾಡಿದ್ದಾರೆ. ಸಂಸದರು ಇಂಥ ದೊಡ್ಡ ಹುದ್ದೆಯಲ್ಲಿದ್ದು ಹೀಗೆಲ್ಲ ಮಾತಾಡಿರೋದು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡ್ತಿದ್ದು, ವೈರಲ್‌ ಆಗ್ತಿದೆ. ಇನ್ನು ಕೆಲ ಪಾಕ್‌ ರಾಜಕಾರಣಿಗಳು ನನ್ನನ್ನು ನಂಬ್ತಿಲ್ಲ ಎಂದು ಹೇಳಿದ್ದಾರೆ. 

ಪಕ್ಷದಿಂದ ಹೊರಗಡೆ ಇಟ್ರು! 
ಸದ್ಯ ಜೈಲು ವಾಸ ಅನುಭವಿಸುತ್ತಿರುವ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ರ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದಲ್ಲಿ ಮಾರ್ವತ್ ಅವರು ಈ ಹಿಂದೆ ಸದಸ್ಯರಾಗಿದ್ದರು. ತಾವಿದ್ದ ಪಕ್ಷದ ಬಗ್ಗೆ ಮತ್ತು ಅದರ ಲೀಡರ್‌ಶಿಪ್ ಬಗ್ಗೆ ಪದೇ ಪದೇ ಟೀಕೆ ಮಾಡಿದ್ದರು, ವ್ಯಂಗ್ಯ ಮಾಡಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಹೊರಗಡೆ ಹಾಕಲಾಗಿತ್ತು.

ಪಹಲ್ಗಾಮ್‌ನಲ್ಲಿ ಏನಾಯ್ತು?
2025 ಏಪ್ರಿಲ್ 22 ರಂದು, ಮೂವರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪಹಲ್ಗಾಮ್‌ನಿಂದ ಸುಮಾರು 5 ಕಿಮೀ ದೂರದಲ್ಲಿರುವ ಬೈಸರಾನ್ ಹುಲ್ಲುಗಾವಲಿನಲ್ಲಿ ನೀಚಕೃತ್ಯ ಎಸಗಿದ್ದಾರೆ. ಅಲ್ಲಿಗೆ ಬಂದಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ವಿಧವೆಯರಾಗಲಿ ಎಂದು ಪುರುಷರಿಗೆ ಗುಂಡು ಹಾಕಿ ಕೊಂದಿದ್ದಾರೆ. ಈ ಹಿಂದೆ ಇದೇ ಸ್ಥಳವನ್ನು ಪ್ರವಾಸಿಗರು ‘ಮಿನಿ ಸ್ವಿಟ್ಜರ್‌ಲ್ಯಾಂಡ್’ ಎಂದು ಭಾವಿಸಿ, ಸಿಕ್ಕಾಪಟ್ಟೆ ಎಂಜಾಯ್‌ ಮಾಡಿದ್ದರು. ಈಗ ಈ ಜಾಗದಲ್ಲಿ ಮಾರಣಹೋಮ ನಡೆದಿದೆ. ಈ ಹುಲ್ಲುಗಾವಲಿನಲ್ಲಿ ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಹೋಗಬಹುದು. ಇತ್ತೀಚಿಗೆ ನಡೆದ ಅತ್ಯಂತ ಘೋರವಾದ ಭಯೋತ್ಪಾದಕ ದಾಳಿ ಇದಾಗಿದೆ. ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಶಾಖೆಯೇ ನಾವು ಈ ದಾಳಿ ಮಾಡಿದ್ದೇವೆ ಎಂದು ಹೇಳಿದೆ.

ಪೈನ್ ಅರಣ್ಯದಿಂದ ಭಯೋತ್ಪಾದಕರು ಹೊರಬಂದಿದ್ದು, ಅಲ್ಲಿಯೇ ಕೂತಿದ್ದವರು, ಕುದುರೆ ಸವಾರಿಗರ ಮೇಲೆ, ಊಟ-ತಿಂಡಿ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಒಂದು ಕುಟುಂಬದಲ್ಲಿ ಒಬ್ಬರನ್ನು, ಇಬ್ಬರನ್ನು ಮಾತ್ರ ಕೊಂದಿದ್ದಾರೆ. ಉಳಿದವರು ನರಕ ಅನುಭವಿಸಲಿ ಎಂದು ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಇದರಲ್ಲಿ ಬಹುತೇಕರು ಭಾರತೀಯರು, ದುಬೈ, ನೇಪಾಳದಿಂದ ಬಂದ ಇಬ್ಬರು ವಿದೇಶಿಯರು, ಇಬ್ಬರು ಅಲ್ಲಿನ ಸ್ಥಳೀಯರು ಕೂಡ ಸೇರಿದ್ದಾರೆ.

ಪಹಲ್ಗಾಮ್ ದಾಳಿ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಸಾಕಷ್ಟು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿಮೆ ಮಾಡಿದೆ. ಪ್ರಮುಖವಾದ ಗಡಿ ಮಾರ್ಗಗಳನ್ನು ಮುಚ್ಚಲಾಗಿದೆ, ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಭಾರತದಲ್ಲಿರುವ ಪಾಕಿಸ್ತಾನದವರು ಅವರ ದೇಶಕ್ಕೆ ಮರಳಬೇಕು ಅಥವಾ ನಮ್ಮ ದೇಶದಿಂದ ಹೊರಗಡೆ ಹೋಗಬೇಕು ಎಂದು ಹೇಳಿದೆ. ಇನ್ನು ಪಾಕಿಸ್ತಾನದ ಕಲಾವಿದರ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಭಾರತದಲ್ಲಿ ಒಪನ್‌ ಆಗ್ತಿಲ್ಲ.