ಹಾರ್ದಿಕ್ ತಂದೆಯೇ ಆತನನ್ನು ವಿರೋಧಿಸಿ, ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ವಿವರ

ಅಹಮದಾಬಾದ್[ಫೆ.13]: ಸ್ವತಃ ಹಾರ್ದಿಕ್‌ ಪಟೇಲ್‌ ತಂದೆಯೇ ಮಗನನ್ನು ವಿರೋಧಿಸಿ, ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Scroll to load tweet…

ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ‘ ನಾನು ನವೀನ್‌ ಪಟೇಲ್‌, ಅಮೆರಿಕದಲ್ಲಿ ವಾಸಿಸುತ್ತಿದ್ದೇನೆ ಎಂದು ತಮ್ಮ ನ್ನು ತಾವು ಪರಿಚಯಿಸಿಕೊಳ್ಳುತ್ತಾರೆ. ಜೊತೆಗೆ ಪಾಟೀದಾರ್‌ ಚಳುವಳಿಯ ನಾಯಕ ಹಾರ್ದಿಕ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಮಾತನಾಡುತ್ತಾರೆ. ಜೊತೆಗೆ ನರೇಂದ್ರ ಮೋದಿ ಅವರನ್ನು ‘ಸ್ವತಂತ್ರ ಭಾರತದ ಅತ್ಯುತ್ತಮ ನಾಯಕ’ ಎಂದು ಹೊಗಳಿ, ರಾಹುಲ್‌ ಮತ್ತು ಹಾರ್ದಿಕ್‌ ಪಟೇಲ್‌ ಇನ್ನೂ ಮಾತನಾಡಲು ಕಲಿಯುತ್ತಿರುವ ಮಕ್ಕಳು ಎಂದು ಅಣಕಿಸುತ್ತಾರೆ. ‘ಐ ಸಪೋರ್ಟ್‌ ನರೇಂದ್ರ ಮೋದಿ’ ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ಸ್ವತಃ ಹಾರ್ದಿಕ್‌ ಪಟೇಲ್‌ ತಂದೆಯೇ ನರೇಂದ್ರ ಮೋದಿಗೆ ಬೆಂಬಲ ನೀಡುವಂತೆ ಗುಜರಾತ್‌ ಜನರಿಗೆ ಮನವಿ ಮಾಡಿದ್ದಾರೆ ಎಂದು ವಿವರಣೆ ಬರೆದಿದೆ. ಸದ್ಯ ಈ ಪೋಸ್ಟ್‌ 1400 ಬಾರಿ ಶೇರ್‌ ಆಗಿ ವೈರಲ್‌ ಆಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ ಈ ವಿಡಿಯೋ 2017ರಿಂದಲೂ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ ಹಾರ್ದಿಕ್‌ ಪಟೇಲ್‌ ತಂದೆ ಹೆಸರು ಭರತ್‌ ಪಟೇಲ್‌, ನವೀನ್‌ ಪಟೇಲ್‌ ಅಲ್ಲ. ವಿಡಿಯೋದಲ್ಲಿರುವ ವ್ಯಕ್ತಿ ತಾವು ಅಮೆರಿಕದಲ್ಲಿ ವಾಸಿಸುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಹಾರ್ದಿಕ್‌ ಪಟೇಲ್‌ ತಂದೆಯ ಫೋಟೋಗೂ ವಿಡಿಯೋದಲ್ಲಿರುವ ವ್ಯಕ್ತಿಯ ಮುಖಚರ್ಯೆಗೂ ಸಾಕಷ್ಟುವ್ಯತಾಸವಿದೆ. ಹಾಗಾಗಿ ಸ್ವತಃ ಹಾರ್ದಿಕ್‌ ತಂದೆಯೇ ಮಗನನ್ನು ವಿರೋಧಿಸುತ್ತಾರೆ ಎಂದು ಹರಿದಾಡುತ್ತಿರುವ ವಿಡಿಯೋ ನಕಲಿ ಎಂಬುದು ಸ್ಪಷ್ಟ.