ನವದೆಹಲಿ[ಮಾ.21]: ಭಾರತದ ವಿಪಕ್ಷಗಳೇ ಮಸೂದ್‌ ಅಜರ್‌ನನ್ನು ಉಗ್ರ ಎಂದು ಪರಿಗಣಿಸಿಲ್ಲದಿರುವಾಗ ನಾವು ಜಾಗತಿಕ ಉಗ್ರ ಎಂದು ಘೋಷಿಸಲು ಹೇಗೆ ಸಾಧ್ಯ ಎಂದು ವಿಶ್ವಸಂಸ್ಥೆಯಲ್ಲಿ ಚೀನಾ ಹೇಳಿದೆ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚೀನಾ ಅಧ್ಯಕ್ಷ ಕ್ಸಿ-ಜಿಪಿಂಗ್‌, ಮಸೂದ್‌ ಅಜರ್‌ ಮತ್ತು ವಿರೋಧ ಪಕ್ಷದ ನಾಯಕ ಕಾಮೆಂಟ್‌ನ ಈ ಮೂರು ಫೋಟೋಗಳನ್ನು ಸಂಕಲಿಸಿದ ಪೋಸ್ಟ್‌ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಬಾರೀ ಕಾಮೆಂಟ್‌ಗಳು ವ್ಯಕ್ತವಾಗಿವೆ.

ಆದರೆ ಬೂಮ್‌ ಲೈವ್‌ ಸುದ್ದಿ ಸಂಸ್ಥೆ ಈ ಸುದ್ದಿಯ ನೈಜತೆಯನ್ನು ಬಯಲಿಗೆಳೆದಿದೆ. ಬೂಮ್‌, ಮಾಚ್‌ರ್‍ 14ರಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿರುವ ಹೇಳಿಕೆಯನ್ನು ಪಡೆದಿದ್ದು, ಅದರಲ್ಲಿ ಈ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಹಾಗೂ ಎಲ್ಲೂ ಭಾರತದ ವಿಪಕ್ಷಗಳ ಬಗ್ಗೆಯೂ ಹೇಳಿಕೆ ಇಲ್ಲ ಎಂದು ತಿಳಿದುಬಂದಿದೆ.