Asianet Suvarna News Asianet Suvarna News

[ವೈರಲ್‌ ಚೆಕ್‌ ] ನಿಪಾ ವೈರಸ್‌ ಹೋಮಿಯೋಪತಿ ಔಷಧದಿಂದ ಗುಣವಾಗುವುದು ನಿಜವೇ?

ನಿಪಾ ವೈರಸ್‌ಗೆ ಹೋಮಿಯೋಪತಿ ಔಷಧ ಲಭ್ಯವಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Viral Check: Homeopathic medicine can cure you from Nipah outbreak

ಬೆಂಗಳೂರು :  ನಿಪಾ ವೈರಸ್‌ ಅಥವಾ ಬಾವಲಿ ಜ್ವರ ದೇಶದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈಗಾಗಲೇ ಈ ರೋಗಕ್ಕೆ ಕೇರಳದಲ್ಲಿ 13 ಮಂದಿ ಬಲಿಯಾಗಿದ್ದಾರೆ. ಈ ಜ್ವರ ತಲುಗಿದರೆ ಗುಣಪಡಿಸಲು ಯಾವುದೇ ಔಷಧಗಳಿಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ, ನಿಪಾ ವೈರಸ್‌ಗೆ ಹೋಮಿಯೋಪತಿ ಔಷಧ ಲಭ್ಯವಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೋಮಿಯೋಪತಿ ಜೆಲ್ಸೀಮಿಯಮ್‌- 200 ಎಂಬ ಮಾತ್ರೆಯನ್ನು ವಾರದಲ್ಲಿ 3 ಬಾರಿಯಂತೆ 3 ವಾರಗಳ ತನಕ ಸೇವಿಸಿದರೆ ನಿಪಾ ವೈರಸ್‌ ಕಡಿಮೆಯಾಗುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಕಷ್ಟುಜನರು ಈ ಸಂದೇಶವನ್ನು ಷೇರ್‌ ಮಾಡುತ್ತಿದ್ದು, ನಿಪಾ ವೈರಸ್‌ ಕಾಣಿಸಿಕೊಂಡರೆ ಹೋಮಿಯೋಪತಿ ಮಾತ್ರೆಗಳನ್ನು ಸೇವಿಸುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ.

ಈ ಕುರಿತು ಹೋಮಿಯೋಪತಿ ವೈದ್ಯರೊಬ್ಬನ್ನು ಸಂಪರ್ಕಿಸಿ ಹೋಮಿಯೋಪತಿ ಜೆಲ್ಸೀಮಿಯಮ್‌- 200 ಔಷಧಿಯ ಕುರಿತಂತೆ ಕೇಳಲಾಯಿತು. ಅದಕ್ಕವರು ಜೆಲ್ಸೀಮಿಯಮ್‌- 200 ಹೋಮಿಯೋಪತಿಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿರುವ ಔಷಧಯಾಗಿದೆ. ಹಲವಾರು ಸಂದರ್ಭಗಳಲ್ಲಿ ಈ ಔಷಧಿಯನ್ನು ಬಳಸಲಾಗುತ್ತದೆ. ಹೋಮಿಯೋಪತಿಯಲ್ಲಿ ರೋಗ ಲಕ್ಷಣಕ್ಕೆ ಅನುಗುಣವಾಗಿ ಔಷಧವನ್ನು ನೀಡಲಾಗುತ್ತದೆ. ರೋಗದ ಆಧಾರದ ಮೇಲೆ ಔಷಧಿಯನ್ನು ತಯಾರಿಸುವುದಿಲ್ಲ.

ನಿಪಾ ವೈರಸ್‌ ಹೋಮಿಯೋಪತಿಯಿಂದ ಗುಣಪಡಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ನಿಪಾ ವೈರಸ್‌ ಅನ್ನು ಹೋಮಿಯೋಪತಿ ಔಷಧ ಗುಣಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ.

Follow Us:
Download App:
  • android
  • ios