Asianet Suvarna News Asianet Suvarna News

ರೊಹಿಂಗ್ಯಾಗಳು ಹಿಂದೂಗಳನ್ನು ಕೊಂದು ಮಾಂಸವನ್ನು ಮಾರಾಟಕ್ಕಿಟ್ಟಿದ್ದು ನಿಜವೇ?

ರೊಹಿಂಗ್ಯಾ ಮುಸ್ಲಿಮರಿಂದ ಹಿಂದುಗಳ ಮಾರಣ ಹೋಮ ಮತ್ತು ನರಭಕ್ಷಣೆ’ ಎನ್ನುವಂತಹ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋವು ರಕ್ತಸಿಕ್ತವಾದ ದೃಶ್ಯಗಳನ್ನು ಒಳಗೊಂಡಿದ್ದು, ಮೂವರು ಮಾಂಸ ಮಾರಾಟಕ್ಕೆ ಕುಳಿತಿರುವ ಚಿತ್ರಣವಿದೆ. ಮಾನವನ ಅಂಗಾಂಗಗಳು ಎನ್ನುವಂತಹ ರಕ್ತಸಿಕ್ತವಾದ ಖಂಡತುಂಡುಗಳು ಅಲ್ಲಿಲ್ಲಿ ಬಿದ್ದಿವೆ.

Viral Check about Rohingya Hindus

ಬೆಂಗಳೂರು (ಜೂ. 01): ರೊಹಿಂಗ್ಯಾ ಮುಸ್ಲಿಮರಿಂದ ಹಿಂದುಗಳ ಮಾರಣ ಹೋಮ ಮತ್ತು ನರಭಕ್ಷಣೆ’ ಎನ್ನುವಂತಹ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೋವು ರಕ್ತಸಿಕ್ತವಾದ ದೃಶ್ಯಗಳನ್ನು ಒಳಗೊಂಡಿದ್ದು, ಮೂವರು ಮಾಂಸ ಮಾರಾಟಕ್ಕೆ ಕುಳಿತಿರುವ ಚಿತ್ರಣವಿದೆ. ಮಾನವನ ಅಂಗಾಂಗಗಳು ಎನ್ನುವಂತಹ ರಕ್ತಸಿಕ್ತವಾದ ಖಂಡತುಂಡುಗಳು ಅಲ್ಲಿಲ್ಲಿ ಬಿದ್ದಿವೆ. ‘ಈ ವಿಡಿಯೋದಲ್ಲಿರುವವರು ರೊಹಿಂಗ್ಯಾ ಮುಸ್ಲಿಮರು. ಹಿಂದುಗಳು ಇಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಅಲ್ಲಿ ರೊಹಿಂಗ್ಯಾಗಳು ಹಿಂದುಗಳನ್ನೇ ಕೊಂದು ಮಾನವನ ಮಾಂಸವನ್ನೇ ಭಕ್ಷ್ಯಿಸುತ್ತಿದ್ದಾರೆ’ ಎಂದು ಅಡಿಬರಹವನ್ನು ಬರೆಯಲಾಗಿದೆ.

ಆದರೆ ನಿಜಕ್ಕೂ ರೊಹಿಂಗ್ಯಾಗಳು ಹಿಂದುಗಳನ್ನು ಕೊಂದು, ಮಾಂಸ ಮಾರಾಟ ಮಾಡುತ್ತಿದ್ದರೇ ಎಂದು ‘ಬೂಮ್‌ ಲೈವ್‌’ ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ನಕಲಿ ವಿಡಿಯೋ ಎಂಬುದಕ್ಕೆ ಪೂರಕವಾದ ಅಂಶಗಳು ದೊರೆತಿವೆ. ಮೊದಲನೆಯದಾಗಿ ವಿಡಿಯೋದಲ್ಲಿ ಹಿಂದಿಯನ್ನು ಬಳಸಲಾಗಿದೆ. ಆದರೆ ಹೆಚ್ಚಿನ ರೊಹಿಂಗ್ಯಾಗಳು ಮ್ಯಾನ್ಮಾರ್‌ ದೇಶದ ಅಧಿಕೃತ ಭಾಷೆಯಾದ ‘ಬರ್ಮೀಸ್‌’ ಭಾಷೆಯನ್ನು ಮಾತನಾಡುತ್ತಾರೆ.

ಅಲ್ಲದೆ ವಿಡಿಯೋದಲ್ಲಿ ಕಾಣುವ ರಕ್ತ ನೈಜ ರಕ್ತ ಕೂಡ ಅಲ್ಲ. ಒಂದೊಮ್ಮೆ ನೈಜ ರಕ್ತವೇ ಆಗಿದ್ದಲ್ಲಿ ರಕ್ತದ ಸುತ್ತ ಇರುವ ಮಣ್ಣು ತೇವವಾಗಿ ಬಣ್ಣ ಬದಲಾಗಬೇಕಿತ್ತು. ಆದರೆ ಅಂತಹ ಯಾವುದೇ ಬದಲಾವಣೆಗಳೂ ಕಾಣಿಸುವುದಿಲ್ಲ ಹಾಗೂ ಚಿತ್ರದಲ್ಲಿ ಕಾಣುವ ಶಿರಚ್ಛೇದನ ದೃಶ್ಯ ವಾಸ್ತವವಾಗಿ ಮಣ್ಣಿನಲ್ಲಿ ಹೂತಿರುವ ವ್ಯಕ್ತಿಯ ಚಿತ್ರ. ಹಾಗಾಗಿ ರೊಹಿಂಗ್ಯಾಗಳು ಹಿಂದುಗಳ ಮಾರಣ ಹೋಮ ಮಾಡಿ ನರಭಕ್ಷ್ಯ ಸವಿಯುತ್ತಿದ್ದಾರೆ ಎಂದು ಹೇಳಲಾದ ವಿಡಿಯೋ ಸುಳ್ಳು. 

Follow Us:
Download App:
  • android
  • ios