ವಕ್ಫ್ ಬೋರ್ಡ್'ಗೆ ಸೇರಿದ 2.1 ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣವಾಗಿದೆ. ಆದರೆ ಮಸೀದಿಗೆ ಹೋಗುವ ರಸ್ತೆ ಡಿಫೆನ್ಸ್'ಗೆ ಸೇರಿದ್ದು ಅಂತಾ ಸೇನಾಪಡೆ ಇಂದು ವಶಕ್ಕೆ ಮುಂದಾಗಿತ್ತು. ಪ್ರಕರಣ ಹೈಕೋರ್ಟ್ ನಲ್ಲಿದ್ದು ವಿಚಾರಣೆ ನಡೆಯುತ್ತಿದೆ.

ಅವರೆಲ್ಲಾ ದಶಕಗಳಿಂದ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಬಂದವರು.ನೂರಾರು ವರ್ಷಗಳ ಇತಿಹಾಸ ಕೂಡಾ ಆ ಮಸೀದಿಗೆ ಇದೆ. ಆದರಿಂದು ಏಕಾಎಕಿ ಸೇನಾ ಪಡೆ ಪ್ರಾರ್ಥನಾ ಮಂದಿರಕ್ಕೆ ಹೋಗಲು ಅಡ್ಡಿಪಡಿಸಿದರು. ಈ ವೇಳೆ ಸ್ಥಳೀಯರು ಹಾಗೂ ಸೇನಾಪಡೆಯ ಜತೆ ಯುದ್ಧವೇ ಜರುಗಿ ಹೋಯಿತು. ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಏನು ಎಂಬುದರ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಒಂದಡೆ ಮಸೀದಿಗೆ ಹೋಗುವ ದಾರಿಯನ್ನು ಬಂದ್ ಮಾಡಿ ಜಾಗವನ್ನು ಸುತ್ತುವರಿದ ಸೇನಾಪಡೆ. ಮತ್ತೊಂದಡೆ ನೂರಾರು ವರ್ಷಗಳ ಇತಿಹಾಸವಿರುವ ಪಾರ್ಥನಾ ಮಂದಿರಕ್ಕೆ ಹೋಗಲು ಅವಕಾಶ ಸಿಗದೆ ಹತಾಶರಾಗಿ ಮುನ್ನುಗ್ಗುತ್ತಿರುವ ಸ್ಥಳೀಯ ಇಸ್ಲಾಮಿಗರು.ಈ ವೇಳೆ ಲಾಠಿ ಚಾರ್ಜ್, ಕಲ್ಲು ತೂರಾಟ 

ಅಂದಹಾಗೆ ರಾಜಧಾನಿ ಜೆ.ಸಿ ನಗರದಲ್ಲಿ ಅಬ್ದುಲ್ ಖಾದರ್ ಮಸೀದಿ ಅಂತಾಲೇ ಫೇಮಸ್ ಆದ ಮಸೀದಿಯನ್ನು ಸೇನೆ ಇಂದು ಸುತ್ತುವರಿದಿತ್ತು. 102 ವರ್ಷಗಳ ಇತಿಹಾಸವಿರುವ ಈ ಪ್ರಾರ್ಥನಾ ಮಂದಿರಕ್ಕೆ ಸೇನಾ ಪಡೆ ಅವಕಾಶ ನಿರಾಕರಿಸದಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಹೀಗೆ ಸೇನಾ ಬಿಗಿ ಬಂದೋಬಸ್ತ್ ಕೈಗೊಂಡು ಮಸೀದಿಗೆ ಹೋಗುವ ದಾರಿಯನ್ನು ಬಂದ್ ಮಾಡುತ್ತಿದ್ದಂತೆ ಕೆರಳಿದ ಜನರು ಸೈನಿಕರ ಮೇಲೆ ಮುಗಿಬಿದ್ದು ಮುನ್ನುಗ್ಗುವ ಯತ್ನ ಮಾಡಿದರು.ಈ ವೇಳೆ ಲಾಠಿ ಚಾರ್ಜ್ ನಡೆಯಿತು. ಪ್ರತಿಯಾಗಿ ಜನರು ಕೂಡಾ ಸೇನೆ ಮೇಲೆ ಕಲ್ಲು ತೂರಾಟ ನಡೆಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಪ್ರಾರ್ಥನಾ ಮಂದಿರ ಮುಖಂಡರ ಜತೆ ಸಭೆ ನಡೆಸಿದರು. ತಕ್ಷಣದಲ್ಲಿ ಜಾಗ ಸ್ವಾಧೀನ ಪಡಿಸಿಕೊಳ್ಳದಂತೆ ಸೇನಾಧಿಕಾರಿಗಳ ಮನವೊಲಿಸುವಲ್ಲಿ ಜನಪ್ರತಿನಿಧಿಗಳು ಯಶಸ್ವಿಯಾದರು.

ಇಷ್ಟಕ್ಕೂ 80-100 ಏಕರೆ ಡಿಫೆನ್ಸ್'ಗೆ ಸೇರಿದ್ದಾಗಿದೆ. ಇದರ ಮಧ್ಯೆ ವಕ್ಫ್ ಬೋರ್ಡ್'ಗೆ ಸೇರಿದ 2.1 ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣವಾಗಿದೆ. ಆದರೆ ಮಸೀದಿಗೆ ಹೋಗುವ ರಸ್ತೆ ಡಿಫೆನ್ಸ್'ಗೆ ಸೇರಿದ್ದು ಅಂತಾ ಸೇನಾಪಡೆ ಇಂದು ವಶಕ್ಕೆ ಮುಂದಾಗಿತ್ತು. ಪ್ರಕರಣ ಹೈಕೋರ್ಟ್ ನಲ್ಲಿದ್ದು ವಿಚಾರಣೆ ನಡೆಯುತ್ತಿದೆ. 2011ರಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯವೇ ಸೇನೆ ಮತ್ತು ರಾಜ್ಯ ವಕ್ಫ್ ಬೋರ್ಡ್ ಗೆ ಸೂಚನೆ ನೀಡಿತ್ತು. ಈ ಬಗೆಗಿನ ಸಮರ್ಪಕ ದಾಖಲೆಯನ್ನು ಸೇನಾಪಡೆ ಮಸೀದಿಯ ಆಡಳಿತ ಮಂಡಳಿ ನೀಡಿದ ಬಳಿಕ ಮಸೀದಿ ಪ್ರವೇಶಕ್ಕೆ ಸೇನಾಪಡೆ ಅವಕಾಶ ಮಾಡಿಕೊಟ್ಟಿದೆ. ಸದ್ಯ ಗೊಂದಲ ಬಗೆಹರಿದಿದ್ದರೂ ಕೂಡಾ ಸ್ಥಳದಲ್ಲಿ ಪರಿಸ್ಥಿತಿ ಬುದಿ ಮುಚ್ಚಿದ ಕೆಂಡದಂತಿದೆ.

- ಗಣೇಶ್ ಹೆಗಡೆ, ಸುವರ್ಣ ನ್ಯೂಸ್