ನಿರ್ಜಲೀಕರಣ ಸಮಸ್ಯೆಯಿಂದಾಗಿ ಕಳೆದ ವಾರ ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ವಿನೋದ್‌ ಖನ್ನಾ (70) ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರಬಹುದು ಎನ್ನಲಾ​ಗಿದೆ. ತುಂಬಾ ಬಳಲಿದಂತೆ ಕಾಣುವ ಖನ್ನಾ, ತಮ್ಮ ಬೆಡ್‌ನಿಂದ ಮೇಲೆದ್ದು ನಿಲ್ಲಲು ಇಬ್ಬರ ನೆರವು ಪಡೆದಿರುವ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕ್ಯಾನ್ಸರ್‌ನಿಂದಲೇ ಅವರು ಈ ಪರಿಯಾಗಿ ಬಳಲಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಖನ್ನಾ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಅವರ ಪುತ್ರ ಹೇಳಿದ್ದಾರೆ.

ಮುಂಬೈ(ಎ.07): ನಿರ್ಜಲೀಕರಣ ಸಮಸ್ಯೆಯಿಂದಾಗಿ ಕಳೆದ ವಾರ ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ವಿನೋದ್‌ ಖನ್ನಾ (70) ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರಬಹುದು ಎನ್ನಲಾ​ಗಿದೆ. ತುಂಬಾ ಬಳಲಿದಂತೆ ಕಾಣುವ ಖನ್ನಾ, ತಮ್ಮ ಬೆಡ್‌ನಿಂದ ಮೇಲೆದ್ದು ನಿಲ್ಲಲು ಇಬ್ಬರ ನೆರವು ಪಡೆದಿರುವ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕ್ಯಾನ್ಸರ್‌ನಿಂದಲೇ ಅವರು ಈ ಪರಿಯಾಗಿ ಬಳಲಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಖನ್ನಾ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಅವರ ಪುತ್ರ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಅವರು ಮೂತ್ರಪಿಂಡದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ‘ಕಳೆದ ಶುಕ್ರವಾರ ತೀವ್ರ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯದಲ್ಲಿ ಕೊಂಚ ಸುಧಾ ರಣೆಯಾಗಿದ್ದು, ಶೀಘ್ರ ಡಿಸ್ಚಾಜ್‌ರ್‍ ಆಗಲಿದ್ದಾರೆ,' ಎಂದು ಖನ್ನಾ ಪುತ್ರ ರಾಹುಲ್‌ ಹೇಳಿದ್ದ ಎರಡು ದಿನಗಳ ಬಳಿಕವೇ, ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಸಾಕಷ್ಟುಸಂಚಲನ ಮೂಡಿಸಿವೆ.