ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಯೋಗೀಶ್ ಗೌಡ ಪರ ವಕೀಲ ಆನಂದ್ಗೆ ಧಮ್ಕಿ ಹಾಕಿದ್ದು ನಿಜವೆಂದು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರು (ನ.25): ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಯೋಗೀಶ್ ಗೌಡ ಪರ ವಕೀಲ ಆನಂದ್ಗೆ ಧಮ್ಕಿ ಹಾಕಿದ್ದು ನಿಜವೆಂದು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.
ಆನಂದ್ ವಿರುದ್ಧ ಕೋಪದಲ್ಲಿ ಮಾತನಾಡಿದ್ದೇನೆ. ನಮ್ಮ ಹುಡುಗ ಎಂಬ ಸಲಿಗೆಯಿಂದ ಮಾತನಾಡಿದ್ದೇನೆ. ಕೋಪದ ಭರದಲ್ಲಿ ನಾಲ್ಕೈದು ಕೆಟ್ಟ ಪದ ಬಳಕೆಯಾಗಿದೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.
ಯೋಗೀಶ್ ಗೌಡ ಸಹೋದರ ಗುರುನಾಥಗೌಡ ಜತೆ ಸಂಧಾನ ಮಾತುಕತೆ ನಡೆಸಿದ್ದನ್ನು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ. ಆಪ್ತ ಮಹೇಶ್ ಶೆಟ್ಟಿ ಮನೆಗೆ ಗುರುನಾಥಗೌಡರೇ ಬಂದಿದ್ದರು. ನನ್ನ ಬಳಿ ಗುರುನಾಥಗೌಡರೇ ಬಂದಿದ್ದರು. ನಾನು ಕರೆಸಿಲ್ಲ. ನಾನು ಏನು ಮಾತನಾಡಿದೆ ಅನ್ನೋದನ್ನ ಅವರ ಬಳಿಯೇ ಕೇಳಿ ಎಂದಿದ್ದಾರೆ.
