ಜ್ಯೋತಿಷಿ ಮಾತು ನಂಬಿ ಊರನ್ನೇ ತೊರೆದ ಗ್ರಾಮಸ್ಥರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 4:54 PM IST
Villagers abandon homes on Astrologer advise
Highlights

ಜ್ಯೋತಿಷಿಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು

ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿ

ಶಿಗುವಾನಿ ಗ್ರಾಮ ಖಾಲಿ ಮಾಡಿದ‌ ಹಕ್ಕಿಪಿಕ್ಕಿ ಕುಟುಂಬಗಳು

ರಾತ್ರೋರಾತ್ರಿ ಊರು ಬಿಟ್ಟ 50 ಕ್ಕೂ ಹೆಚ್ಚು ಕುಟುಂಬ

ಗ್ರಾಮದಲ್ಲಿ ತೊಂದರೆ ಇದೆ ಎಂದ‌ ಜ್ಯೋತಿಷಿ

ಸಾಕು ಪ್ರಾಣಿಗಳನ್ನ ಗ್ರಾಮದಲ್ಲೇ ಬಿಟ್ಟು ಹೋದ ಜನರು

ಚಿಕ್ಕಮಗಳೂರು(ಜು.27): ಗ್ರಾಮದಲ್ಲಿ ತೊಂದರೆ ಇದೆ ಎಂಬ ಜ್ಯೋತಿಷಿ ಮಾತು ನಂಬಿ ಗ್ರಾಮಸ್ಥರು ಊರನ್ನೇ ತೊರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಎನ್‌.ಆರ್. ಪುರದ ಬಾಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿಗುವಾನಿ ಗ್ರಾಮದ ಜನರೇ ಜ್ಯೋತಿಷಿ ಮಾತು ನಂಬಿ ಗ್ರಾಮ ತೊರೆದವರು. ಶಿಗುವಾನಿ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ.

ಆದರೆ ಕಳೆದ 8 ವರ್ಷದಲ್ಲಿ ಈ ಗ್ರಾಮದಲ್ಲಿ ೨೫ಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದು, ಈ ಗ್ರಾಮದಲ್ಲಿ ತೊಂದರೆ ಇರುವುದೇ ಇದಕ್ಕೆ ಕಾರಣ ಎಂದು ಜ್ಯೋತಿಷಿಯೋರ್ವ ಜನರನ್ನು ನಂಬಿಸಿದ್ದ. ಜ್ಯೋತಿಷಿ ಮಾತನ್ನು ನಂಬಿದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಊರನ್ನು ತೊರೆದಿವೆ.

ಸಾಕುಪ್ರಾಣಿಗಳನ್ನು ಗ್ರಾಮದಲ್ಲೇ ಬಿಟ್ಟು ಹೋಗಿರುವ ಗ್ರಾಮಸ್ಥರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader