ಈ ಪ್ರಕರಣದಲ್ಲಿ ಮೇಟಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ನನಗೆ ನ್ಯಾಯ ಬೇಕು. ಈ ಸಂಬಂಧ ಡಿಜಿಗೆ  ದೂರು ನೀಡಲು ತೆರಳುತ್ತಿದ್ದೇನೆ ಎಂದರು.

ಬಾಗಲಕೋಟೆ(ಆ.17): ಮೇಟಿ ರಾಸಲೀಲೆ ಪ್ರಕರಣ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ವೀಡಿಯೋದಲ್ಲಿರುವುದು ನಾನೇ ಎಂದು ಸಂತ್ರಸ್ತೆ ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇತ್ತು.ಹಾಗಾಗಿ ನನಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎಂ ಸಂತ್ರಸ್ತೆ ಹೇಳಿದ್ದಾರೆ. ಈ ಪ್ರಕರಣದಲ್ಲಿ ಮೇಟಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ನನಗೆ ನ್ಯಾಯ ಬೇಕು. ಈ ಸಂಬಂಧ ಡಿಜಿಗೆ ದೂರು ನೀಡಲು ತೆರಳುತ್ತಿದ್ದೇನೆ ಎಂದರು.

ಜೀವ ಬೆದರಿಕೆ ಹಾಕಿ ಹಲವು ಬಾರಿ ನನ್ನ ಮೇಲೆ ಮೇಟಿ ಅತ್ಯಾಚಾರ ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಕಠಿಣ ಶಿಕ್ಷೆಯಾಗಿ ನನಗೆ ನ್ಯಾಯ ಸಿಗಬೇಕೆಂದು ಡಿಜಿಪಿ ರೂಪಕ್ ಕುಮಾರ್​ ದತ್ತಾ ಅವರಿಗೆ ದೂರು ದಾಖಲಿಸಿರುವುದಾ ತಿಳಿಸಿದ್ದಾ.