ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್’ಗೆ ಪತ್ರ ಬರೆದಿರುವ ಸಂಸತ್ತು ವ್ಯವಹಾರ ಇಲಾಖೆ ರಾಜ್ಯ ಸಚಿವ ವಿಜಯ್ ಗೋಯಲ್,  ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ.

ನವದೆಹಲಿ: ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್’ಗೆ ಪತ್ರ ಬರೆದಿರುವ ಸಂಸತ್ತು ವ್ಯವಹಾರ ಇಲಾಖೆ ರಾಜ್ಯ ಸಚಿವ ವಿಜಯ್ ಗೋಯಲ್, ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವ ದಿನಾಂಕ ಸೆ.15ಕ್ಕೆ ಮುಗಿದಿದೆ. ಅದಾಗ್ಯೂ, ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಗೋಯಲ್, ಕ್ರೀಡಾಕ್ಷೇತ್ರದಲ್ಲಿ ಶ್ರೀಕಾಂತ್ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ.

 ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಸಾಧಾರಣವಾದುದ್ದು. ದೇಶದ ಯುವಜನರಿಗೆ ಪ್ರೇರಣೆಯಾಗಿರುವ ಶ್ರೀಕಾಂತ್ ಅವರ ಸಾಧನೆಯನ್ನು ಗೌರವಿಸಬೇಕೆಂಬುವುದು ಕೋಟ್ಯಾಂತರ ಜನರ ಪೇಕ್ಷೆಯಾಗಿದೆ. ಆದುದರಿಂದ, ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಬೇಕೆಂದು ನಾನು ಶಿಫಾರಸ್ಸು ಮಾಡುತ್ತೇನೆ, ಎಂದು ಗೋಯಲ್ ಬರೆದಿದ್ದಾರೆ.