ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ  ಖಚಿತವಾಗಿದ್ದು, ಬಿಜೆಪಿ ಐದು, ಕಾಂಗ್ರೆಸ್ ನಾಲ್ಕು ಮತ್ತು ಜೆಡಿಎಸ್ ಇಬ್ಬರನ್ನು ಕಣಕ್ಕಿಳಿಸಲು ಮುಂದಾಗಿವೆ. ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿದ್ದು,  ನಾಮಪತ್ರಗಳ ಪರಿಶೀಲನೆ ಜೂ.೧ರಂದು ನಡೆಯಲಿದೆ.

ಬೆಂಗಳೂರು (ಮೇ. 31): ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ ಐದು, ಕಾಂಗ್ರೆಸ್ ನಾಲ್ಕು ಮತ್ತು ಜೆಡಿಎಸ್ ಇಬ್ಬರನ್ನು ಕಣಕ್ಕಿಳಿಸಲು ಮುಂದಾಗಿವೆ.

ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜೂ.1 ರಂದು ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜೂ.೪ ಕೊನೆಯ ದಿನವಾಗಿದೆ. ಒಂದು ವೇಳೆ ೧೧ ಕ್ಷೇತ್ರಗಳಿಗೆ ೧೧ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದಲ್ಲಿ ಪರಿಶೀಲನೆ ಬಳಿಕ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ. 11 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದಲ್ಲಿ ಮಾತ್ರ ಜೂ.11 ಕ್ಕೆ ಚುನಾವಣೆ ನಡೆಯಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬುಧವಾರ ಸಂಜೆಯೇ ತಮ್ಮ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಗೊಳಿಸಿದ್ದು, ಜೆಡಿಎಸ್ ಗುರುವಾರ ಬೆಳಗ್ಗೆ ಅಂತಿಮಗೊಳಿಸಲಿದೆ. ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಂತಿಮ ದಿನವಾದ ಗುರುವಾರವೇ ನಾಮಪತ್ರ ಸಲ್ಲಿಸುತ್ತಿದ್ದಾರೆ. 

ಬಿಜೆಪಿ
 ರುದ್ರೇಗೌಡ
 ತೇಜಸ್ವಿನಿ ಗೌಡ
 ಕೆ.ಪಿ.ನಂಜುಂಡಿ
 ರಘುನಾಥ
ಮಲ್ಕಾಪುರೆ
 ರವಿಕುಮಾರ್

ಕಾಂಗ್ರೆಸ್

 ಕೆ.ಗೋವಿಂದ ರಾಜ್
 ಸಿ.ಎಂ.ಇಬ್ರಾಹಿಂ
 ಅರವಿಂದ ಅರಳಿ
 ಕೆ.ಹರೀಶ್ ಕುಮಾರ್

ಜೆಡಿಎಸ್
 ಬಿ.ಎಂ.ಫಾರೂಕ್
 ಡಾ|ಎಸ್.ಸುಬ್ರಮಣ್ಯ