ರಾಮಮಂದಿರ ನಿರ್ಮಾಣಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಮಾಣ; ವೈರಲ್ ಆಯ್ತು ವಿಡಿಯೋ

Video shows IPS officer pledge early construction of Ram temple
Highlights

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇವಲ ಸಾಧು ಸಂತರು, ಬಿಜೆಪಿ ನಾಯಕರು ಮಾತ್ರವಲ್ಲ, ಹಿರಿಯ ಐಪಿಎಸ್ ಅಧಿಕಾರಿಗಳು   ಸಂಕಲ್ಪ ಮಾಡಿದ್ದಾರೆ.  21 ಸೆಕೆಂಡ್'ಗಳ ಸಂಕಲ್ಪ ಪ್ರಮಾಣದ ವಿಡಿಯೋ ಈಗ ವೈರಲ್ ಆಗಿದೆ.

ನವದೆಹಲಿ (ಫೆ.02): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇವಲ ಸಾಧು ಸಂತರು, ಬಿಜೆಪಿ ನಾಯಕರು ಮಾತ್ರವಲ್ಲ, ಹಿರಿಯ ಐಪಿಎಸ್ ಅಧಿಕಾರಿಗಳು   ಸಂಕಲ್ಪ ಮಾಡಿದ್ದಾರೆ.  21 ಸೆಕೆಂಡ್'ಗಳ ಸಂಕಲ್ಪ ಪ್ರಮಾಣದ ವಿಡಿಯೋ ಈಗ ವೈರಲ್ ಆಗಿದೆ.

ಡಿಜಿ ಸೂರ್ಯಕುಮಾರ್ ಶುಕ್ಲಾ  ಪ್ರಮಾಣ ವಚನ ಸ್ವೀಕರಿಸಿದ್ದಾರೆ "ರಾಮಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಸಂಕಲ್ಪ ಮಾಡುತ್ತಿದ್ದೇವೆ, ಆದಷ್ಟು ಬೇಗನೇ ರಾಮ ಮಂದಿರದ ಭವ್ಯ ನಿರ್ಮಾಣ ಆಗಬೇಕು.  ಜೈ ಶ್ರೀರಾಮ್ ಎಂದು ಡಿಜಿ ಶುಕ್ಲಾ ಇತರ ಅಧಿಕಾರಿಗಳೊಂದಿಗೆ ಪ್ರಮಾಣ ಸ್ವೀಕರಿಸಿದ್ದಾರೆ.

ರಾಮಮಂದಿರ ವಿವಾದ ತುಂಬಾ ವರ್ಷದಿಂದ ಇದೆ.  ಇದಕ್ಕೆ ನಾವು ನಾವೊಂದು ಫುಲ್​ಸ್ಟಾಪ್​ ಕೊಡಲು ನಿರ್ಧರಿಸಿದ್ದೇವೆ ಎಂದಿರುವ  ಈ ವಿಡಿಯೋ ಈಗ ವೈರಲ್ ಆಗಿದೆ.

loader