ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೀನಾ ಪ್ರವಾಸಕ್ಕೆ  ತೆರಳಿರುವುದನ್ನು ವ್ಯಂಗ್ಯ ಮಾಡಲು ಹೋಗಿ ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಅಪ್ ಡೇಟ್ ಮಾಡಿರುವ ವಿಡಿಯೋದಲ್ಲಿನ ಫೋಟೋವೊಂದು ಈಗ ಅಸಲಿ-ನಕಲಿ ಕತೆ ಹೇಳುತ್ತಿದೆ. 

ರಾಹುಲ್ ವ್ಯಂಗ್ಯ ಮಾಡಲು ಹೋಗಿ ಬಿಜೆಪಿ ಪ್ರಮಾದ ಮಾಡಿಕೊಂಡಿತೆ? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಚೀನಾದ ಪುಡ್ ಫೆಸ್ಟಿವಲ್ ನಲ್ಲಿ ರಾಃಉಲ್ ರಾಬರ್ಟ್ ವಾದ್ರಾ ಅವರೊಂದಿಗೆ ಇದ್ದಾರೆ ಎಂಬ ಧ್ವನಿ ಹೇಳುತ್ತಿರುತ್ತದೆ. ರಾಹುಲ್ ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾ ಮತ್ತು ಚೀನಾ ಡೇಲಿಗೇಟ್ಸ್ ಜತೆ ಇರುವ ಫೋಟೋದ ನಂತರ ಕತೆ ಆರಂಭವಾಗುತ್ತದೆ.

ಆದರೆ ಈ ಪೋಟೋದ ಅಸಲಿಯತ್ತನ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಹಿಂದೆ ಚೀನಾದ ಡೆಲಿಗೆಟ್ಸ್ ಭಾರತಕ್ಕೆ ಭೇಟಿ ನೀಡಿದ್ದಾಗ ತೆಗೆದ ಚಿತ್ರ ಇದೆಉ ಎಂಬ ಮಾತು ಕೇಳಿಬಂದಿದೆ. ಅಲ್ಲದೇ ಇದೇ ಫೋಟೋ ವನ್ನು ಬಳಸಿ ರಾಷ್ಟ್ರೀಯ ಚಾನಲ್ ಗಳೆರಡು ಕಳೆದ 2017ರ ಜುಲೈನಲ್ಲಿ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಫೋಟೋದ ಸತ್ಯಾಸತ್ಯತೆ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ.

ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳ ವೇಗದ;ಲ್ಲಿ ಅಸಲಿ, ನಕಲಿ ಯಾವುದು ಎಂದು ಗುರುತಿಸುವುದು ಸುಲಭಕ್ಕೆ ಸಾಧ್ಯವಾಗದೆ ಹೋಗುತ್ತದೆ. ಇದನ್ನೇ ಆಧಾರಗಿಟ್ಟುಕೊಂಡಿದ್ದರೆ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಗುರಿಯಾಗಬೇಕಾಗಿರುವುದೆಂತೂ ಸತ್ಯ.

Scroll to load tweet…