ಬೀದರ್[ಜ.23] ಸಿದ್ಧಗಂಗಾ ಮಠದಲ್ಲಿ ಅನ್ನದ ಮಹತ್ವ ಸಾರಿದ ಬಾಲಕ ಶಿವು ಒಬ್ಬ ದಾರ್ಶನಿಕನಂತೆ ಕಾಣುತ್ತಿದ್ದರೆ ಈ ಗೋಮಾತೆ ಕುಡಿಯುವ ನೀರು ಈ ಜಗಕ್ಕೆ ಎಷ್ಟು ಅಗತ್ಯ ಎಂಬುದನ್ನು ಸಾರಿ ಸಾರಿ ಹೇಳಿದೆ.

ಬೀದಿ ಪಕ್ಕದ ನಲ್ಲಿಯನ್ನು ತಿರುಗಿಸುವ ಹಸು ತನಗೆ ಬೇಕಾದಷ್ಟು ನೀರು ಕುಡಿದು ನಂತರ ನಲ್ಲಿಯನ್ನು ತಾನೇ ಬಂದ್ ಮಾಡುತ್ತದೆ. 

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

ಬೀದರ್‌ನ ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ಆಕಳು ನೀರು ಕುಡಿದು ದಣಿವಾರಿಸಿಕೊಂಡ ನಂತರ ಬಾಯಿಂದ ನಲ್ಲಿಯನ್ನು ಬಂದ್ ಮಾಡುವುದನ್ನು ಕಾಣಬಹುದು. ಬಾಯಾರಿಕೆಯಾದಾಗ ಪ್ರತಿ ಸಾರಿಯೂ ಈ ಆಕಳು ಹೀಗೆ ಮಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಮಾತು ಬಾರದ ಪಶುಗಳಿಂದಲೂ ಮಾನವ ಕಲಿಯಬೇಕಾದದ್ದು ಬಹಳ ಇದೆ.