ಜೈಲಿನಲ್ಲಿರುವ ಕೈದಿಗಳಿಗೆ ಕುಟುಂಬದ ಸಂಪರ್ಕಕ್ಕೆ ಸಿಗುತ್ತಿದೆ ಹೊಸ ಅವಕಾಶ

news | Tuesday, January 23rd, 2018
Suvarna Web Desk
Highlights

ಮಹಾರಾಷ್ಟ್ರದಲ್ಲಿ ಕೈದಿಗಳು ತಮ್ಮ ಕುಟುಂಬಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಮಾತುಕತೆ ನಡೆಸುವ ಸೌಲಭ್ಯವನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

ನವದೆಹಲಿ: ಮಹಾರಾಷ್ಟ್ರದಲ್ಲಿ ಕೈದಿಗಳು ತಮ್ಮ ಕುಟುಂಬಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಮಾತುಕತೆ ನಡೆಸುವ ಸೌಲಭ್ಯವನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಜೈಲು ಸುಧಾರಣೆ ಕುರಿತು ಅಧಿಕಾರಿಗಳು ನಡೆಸಿದ ಚರ್ಚೆ ವೇಳೆ ಜೈಲಿನಲ್ಲಿರುವ ಕೈದಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸೇವೆ ನೀಡುವ ಸಂಬಂಧವಾಗಿ ಚರ್ಚೆ ನಡೆಸಿದ್ದಾರೆ.

ಇದು ಜಾರಿಗೆ ಬಂದಲ್ಲಿ, ಕೈದಿಗಳ ಸಂಬಂಧಿಕರು ಮೊದಲಿಗೆ ಅರ್ಜಿ ಸಲ್ಲಿಸಬೇಕು. ನಂತರ ನಿರ್ದಿಷ್ಟ ಕಾಲಮಿತಿಯಲ್ಲಿ ಮಾತನಾಡಲು ಅವಕಾಶವಿರಲಿದೆ. ಇದು ಹೊರ ರಾಜ್ಯಗಳಲ್ಲಿರುವ ಕೈದಿಗಳ ಸಂಬಂಧಿಕರಿಗೆ ಅನುಕೂಲವಾಗಲಿದೆ.

Comments 0
Add Comment