ವಾರಣಾಸಿ[ಫೆ.04]: ಗಂಗಾ ಶುದ್ಧೀಕರಣದ ಭಾಗವಾಗಿ ಇದೇ ಮೊದಲ ಬಾರಿಗೆ ನವೆಂಬರ್‌ನಿಂದ ಗಂಗಾ ನದಿಗೆ ವಾರಣಾಸಿ ನಗರದ ಒಳಚರಂಡಿ ಮಲಿನ ನೀರು ಸೇರುವುದು ನಿಲ್ಲಲಿದೆ.

1986 ಜೂನ್ 14 ರಂದು ಈ ಯೋಜನೆಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಚಾಲನೆ ನೀಡಿದ್ದರು. ಆದಾಗ್ಯೂ, ಅದು ಯಾವುದೇ ಪ್ರಗತಿ ಕಂಡಿರಲಿಲ್ಲ. ಆದರೆ ಮೋದಿ ಸರ್ಕಾರ ಬಂದ ನಂತರ ಹಮ್ಮಿಕೊಂಡ ನಮಾಮಿ ಗಂಗೆ ಯೋಜನೆ ಈಗ ಫಲ ನೀಡುತ್ತಿದ್ದು, ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ.

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿದ್ದಾರೆ.