ಈವರೆಗೂ ನೀವು ವಿಚಿತ್ರ ಗುಣ ಹೊಂದಿರುವ ವ್ಯಕ್ತಿಗಳ ಕುರಿತಾಗಿ ಕೇಳಿರಬಹುದು. ಆದರೆ ಇಂಟೋನೇಷ್ಯಾದ ಮಹಿಳೆಯೊಬ್ಬಳ ಹುಚ್ಚುತನದ ಕುರಿತಾಗಿ ಕೇಳಿದ್ರೆ ಶಾಕ್ ಆಗುತ್ತೆ. 29 ವರ್ಷದ ಮಹಿಳೆಗಿರುವ ಆ ಭಯಂಕರ ಚಟ ಯಾವುದು ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ಸ್ಟೋರಿ
ಇಂಡೋನೇಷ್ಯಾ(ಫೆ.12): ಈವರೆಗೂ ನೀವು ವಿಚಿತ್ರ ಗುಣ ಹೊಂದಿರುವ ವ್ಯಕ್ತಿಗಳ ಕುರಿತಾಗಿ ಕೇಳಿರಬಹುದು. ಆದರೆ ಇಂಟೋನೇಷ್ಯಾದ ಮಹಿಳೆಯೊಬ್ಬಳ ಹುಚ್ಚುತನದ ಕುರಿತಾಗಿ ಕೇಳಿದ್ರೆ ಶಾಕ್ ಆಗುತ್ತೆ. 29 ವರ್ಷದ ಮಹಿಳೆಗಿರುವ ಆ ಭಯಂಕರ ಚಟ ಯಾವುದು ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ಸ್ಟೋರಿ
ವಾಸ್ತವವಾಗಿ ಈ ಮಹಿಳೆಗೆ ಮನುಷ್ಯನ ಮಾಂಸ ತಿನ್ನುವ ಚಟವಿತ್ತು. ಈ ಮಾಹಿತಿಯನ್ನು ಪಡೆದ ಪೊಲೀಸರು ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದಾರೆ. ಈ ಮಹಿಳೆ ಇಂಡೋನೇಷ್ಯಾದ ರಕ್ತಪಿಶಾಚಿ ಎಂದೇ ಫೇಮಸ್ ಆಗಿದ್ದಾಳೆ.
ಮನುಷ್ಯನ ಮಾಂಸ ತಿನ್ನುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಈಕೆಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾಗ ಫ್ರಿಜ್'ನಲ್ಲಿ ಮನುಷ್ಯನ ದೇಹದ ಅಂಗಾಂಗಗಳು ಪತ್ತೆಯಾಗಿವೆ. ಈಕೆ ಯುವಕರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ, ಬಳಿಕ ಅವರನ್ನು ಹತ್ಯೆಗೈದು ಫ್ರಿಜ್'ನಲ್ಲಿ ಮಾಂಸ ಶೇಕರಿಸಿಡುತ್ತಿದ್ದಳಂತೆ. ಇನ್ನು ಈವರೆಗೂ ಈಕೆಯ ಪ್ರೀತಿಗೆ ಮರುಳಾಗಿ 124 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ ಈ ಮಹಿಳೆ ತನ್ನ ಪತಿಯನ್ನೂ ಮಾಂಸಕ್ಕಾಗಿ ಹತ್ಯೆಗೈದು ಫ್ರಿಜ್'ನಲ್ಲಿಟ್ಟಿದ್ದಾಳಂತೆ. ಇನ್ನು ವಿಚಾರಣೆ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಬಾಯ್ಬಿಟ್ಟಿರುವ ಈಕೆ 'ನಾನು ನನ್ನ ಮನೆಯಲ್ಲಿ ಫ್ರೆಂಡ್ಸ್'ಗಳ ಜೊತೆ ಪಾರ್ಟಿ ಮಾಡುತ್ತಿದ್ದೆ, ಈ ವೇಳೆ ಕೊಂದವರ ಮಾಂಸವನ್ನು ಅಡುಗೆ ಮಾಡಿ ಬಡಿಸುತ್ತಿದ್ದೆ. ಅವರಿಗೆ ಈ ವಿಚಾರ ತಿಳಿದಿಲ್ಲವಾದರೂ ನಾಣು ಮಾಡಿದ ಮಾಂಸದ ಅಡುಗೆ ರುಚಿಯಾಗಿದೆ ಎಂದು ಮತ್ತೆ ಮತ್ತೆ ತಿ9ನ್ನುತ್ತಿದ್ದರು' ಎಂದಿದ್ದಾಳೆ.
ಸದ್ಯ ಜೈಲಿನಲ್ಲಿರುವ ಮಹಿಳೆ ಅಲ್ಲಿದ್ದ ಮಹಿಳಾ ಪೊಲೀಸ್ ಪೇದೆಯ ಮೇಲೆ ದಾಳಿ ನಡೆಸಿ ಆಕೆಯ ಕೈಬೆರಳನ್ನು ತಿಂದಿದ್ದಾಳೆಂದು ಪೊಲೀಸ್ ಇಲಾಖೆ ತಿಳಿಸಿದೆ.
