ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆ ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ

ಲಕ್ನೋ: ಉತ್ತರ ಪ್ರದೇಶದ ಹಜ್ ಭವನ ಆವರಣ ಗೋಡೆಗಳಿಗೆ ಶುಕ್ರವಾರ ‘ಕೇಸರಿ’ ಬಣ್ಣವನ್ನು ಬಳಿಯಲಾಗಿದೆ. ಕೇಸರಿ ಬಣ್ಣವು ಹಿಂದೂಗಳಿಗೆ ಪವಿತ್ರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಯುಪಿ ಸಚಿವ ಮೊಹ್ಸಿನ್ ರಝಾ, ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆಯೆಂದು ಹೇಳಿದ್ದಾರೆ.

ಇದರಲ್ಲೇನು ವಿವಾದಾತ್ಮಕ ವಿಷಯವಿಲ್ಲ; ಕೇಸರಿ ಬಣ್ಣವು ಶಕ್ತಿಯುತ ಹಾಗೂ ಹೊಳೆಯುವ ಬಣ್ಣ, ಅದರಿಂದ ಕಟ್ಟಡವು ಸುಂದರವಾಗಿ ಕಾಣಿಸುತ್ತದೆ, ಎಂದು ಅವರು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ‘ಕೇಸರಿಕರಣ’ ನಡೆಸುತ್ತಿದೆಯೆಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ಹಿಂದೆ, ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ ಬಳಿಯಲಾಗಿದೆ.

(ಏಎನ್ಐ ಚಿತ್ರ)