Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಧೂಳು ಬಿರುಗಾಳಿ

ಉತ್ತರದ ಹಲವು ಭಾಗಗಳಲ್ಲಿ ಇಂದು ಭಾರಿ ಬಿರುಗಾಳಿ ಬೀಸುವ ಸಂಭವವಿದೆ. ಇದರ ತೀವ್ರತೆ ಗಂಟೆಗೆ 50ರಿಂದ 70 ಕಿ.ಮೀ. ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Uttar Pradesh Dust Storm

ನವದೆಹಲಿ: ಉತ್ತರದ ಹಲವು ಭಾಗಗಳಲ್ಲಿ ಇಂದು ಭಾರಿ ಬಿರುಗಾಳಿ ಬೀಸುವ ಸಂಭವವಿದೆ. ಇದರ ತೀವ್ರತೆ ಗಂಟೆಗೆ 50ರಿಂದ 70 ಕಿ.ಮೀ. ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ, ರಾಜಸ್ಥಾನ ಸೇರಿ ಉತ್ತರ ಭಾರತದ ಇತರೆಡೆಗಳಲ್ಲಿ ಸೋಮವಾರವೇ ಧೂಳಿನ ಬಿರುಗಾಳಿ ಅಪ್ಪಳಿಸಿದೆ. 

ಜಮ್ಮು-ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರ್ಯಾಣ, ದಿಲ್ಲಿ, ಚಂಡೀಗಢ, ಪ. ಉತ್ತರ ಪ್ರದೇಶ, ಸಿಕ್ಕಿಂ ಹಾಗೂ ಪ.ಬಂಗಾಳ ಸೇರಿ 13 ರಾಜ್ಯಗಳಲ್ಲಿ ಬಿರುಗಾಳಿ ಬೀಸಬಹುದು ಎಂದು ‘ಕಿತ್ತಳೆ ಬಣ್ಣದ ಎಚ್ಚರಿಕೆ’ ನೀಡಲಾಗಿದೆ. ಹೀಗಾಗಿ ಇದರ ತರುವಾಯ ಉಂಟಾಗುವ ಪರಿಸ್ಥಿತಿ ಎದುರಿಸಲು ಸರ್ಕಾರಿ ಸಂಸ್ಥೆಗಳು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಕರ್ನಾಟಕ ಮತ್ತು ಕೇರಳದ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲೂ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಹವಾಮಾನ ಇಲಾಖೆ ‘ಹಸಿರು’ (ಯಾವುದೇ ಕ್ರಮದ ಅಗತ್ಯವಿಲ್ಲ), ‘ಹಳದಿ’ (ಪರಿಸ್ಥಿತಿ ಅವಲೋಕಿಸಬೇಕು), ಕಿತ್ತಳೆ (ಪರಿಸ್ಥಿತಿ ಎದುರಿಸಲು ಸರ್ಕಾರಿ ಸಂಸ್ಥೆಗಳು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು) ಹಾಗೂ ಕೆಂಪು (ಸರ್ಕಾರಿ ಸಂಸ್ಥೆಗಳಿಂದ ತುರ್ತು ಕ್ರಮದ ಅಗತ್ಯ) ಎಚ್ಚರಿಕೆ ನೀಡುತ್ತದೆ.

Follow Us:
Download App:
  • android
  • ios