ಪಾಕ್‌ಗೆ ಮತ್ತೊಮ್ಮೆ ಗುದ್ದು ಕೊಟ್ಟ ಅಮೆರಿಕ! ಶಾಂತಿ ಸ್ಥಾಪನೆಗೆ ಭಾರತದ ಪ್ರಧಾನಿ ಮೋದಿ ಮಾತು ಕೇಳುವಂತೆ ಸಲಹೆ! ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಭಾರತದ ಪಾತ್ರ ಮುಖ್ಯ! ಪಾಕಿಸ್ತಾನ ಭಾರತದ ಪ್ರಧಾನಿ ಮೋದಿ ಸಲಹೆಯಂತೆ ಮುನ್ನಡಯುವುದು ಒಳ್ಳೆಯದು! ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅಭಿಪ್ರಾಯ

ವಾಷಿಂಗ್ಟನ್(ಡಿ04): ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದು, ಮೋದಿಯವರನ್ನು ಬೆಂಬಲಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಕಿವಿ ಮಾತು ಹೇಳಿದೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಜವಾಬ್ದಾರಿಯುತ ರಾಷ್ಟ್ರಕ್ಕೆ 40 ವರ್ಷಗಳು ಸಾಕು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಇದಕ್ಕೆ ಸೂಕ್ತ ರಾಷ್ಟ್ರ ಎಂದು ಅಮೆರಿಕ ಹೇಳಿದೆ.

Scroll to load tweet…

ಅಮೆರಿಕ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತಿಸಿದ ಬಳಿಕ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಆಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ಕೈಜೋಡಿಸುವಂತೆ ಅಮೆರಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೆ ಇತ್ತೀಚಿಗೆ ಪತ್ರ ಬರೆದಿದ್ದರು. ಇದರಲ್ಲಿ ಪ್ರಧಾಣಿ ಮೋದಿ ಅವರ ಕಾರ್ಯವನ್ನು ಟ್ರಂಪ್ ಶ್ಲಾಘಿಷಿದ್ದರು ಎನ್ನಲಾಗಿದೆ.

Scroll to load tweet…

ಆಘ್ಘಾನಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಪ್ರತಿ ಜವಾಬ್ದಾರಿಯುತ ರಾಷ್ಟ್ರದ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ. ಭಾರತ ಇದಕ್ಕೆ ಸೂಕ್ತ ರಾಷ್ಟ್ರ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಮ್ಯಾಟಿಸ್ ಈ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಸಂಸ್ಥೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಎಲ್ಲರನ್ನೂ ಬೆಂಬಲಿಸುವ ಸಮಯ ಇದಾಗಿದೆ ಎಂದು ಮ್ಯಾಟಿಸ್ ಅಭಿಪ್ರಾಯಪಟ್ಟಿದ್ದಾರೆ.